ಕಿನ್ನಿಗೋಳಿ : ಬರಲಿದೆ ಹೊಸ ಬಸ್ಸು ನಿಲ್ದಾಣ

 ಮುಲ್ಕಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಕಿನ್ನಿಗೋಳಿ ಪಂಚಾಯತಿ ತೀರ್ಮಾನದಂತೆ ಬಸ್ಸು ನಿಲ್ದಾಣ ನೆಲಸಮವಾಗಲಿದ್ದು, ಸುಮಾರು 12 ಲಕ್ಷ ವೆಚ್ಚದಲ್ಲಿ ಹೊಸ ಬಸ್ಸು ನಿಲ್ದಾಣ ನಿರ್ಮಾಣವಾಗಲಿದೆ ಎಂದು ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ತಿಳಿಸಿದ್ದಾರೆ.

ಬುಧವಾರ ನಡೆದ ತುರ್ತು ಸಭೆಯಲ್ಲಿ ಸಂತೋಷ್ ಕುಮಾರ್ ಹೆಗ್ಡೆ ಅವರಿಗೆ ಕಾಮಗಾರಿಯ ಗುತ್ತಿಗೆಯನ್ನು  ನೀಡಲಾಗಿದೆ ಎಂದು ಹೇಳಿದ್ದಾರೆ.