ಕಿನ್ನಿಗೋಳಿ ಶಾಲಾ ಬಾಲಕ ನಾಪತ್ತೆ : ಅಪಹರಣ ಶಂಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಿನ್ನಿಗೋಳಿ ಚರ್ಚ್ ಬಳಿಯ ಶಾಲೆಯೊಂದರ ಬಾಲಕ ಶನಿವಾರ ಮಧ್ಯಾಹ್ನ ನಾಪತ್ತೆಯಾಗಿದ್ದು, ಅಪಹರಣದ ಶಂಕೆ ವ್ಯಕ್ತವಾಗಿದೆ.

ಪರಶುರಾಮ (11) ನಾಪತ್ತೆಯಾದ ವಿದ್ಯಾರ್ಥಿ. ಈತ ಮೂಲತಃ ವಿಜಾಪುರ ನಿವಾಸಿಯಾಗಿದ್ದು, ಕಿನ್ನಿಗೋಳಿ ಮಾರುಕಟ್ಟೆ ಬಳಿಯಲ್ಲಿ ನೆಲೆಸಿದ್ದು, ಕಿನ್ನಿಗೋಳಿಯ ಲಿಟ್ಲ್ ಫ್ಲವರ್ ಶಾಲೆಯ 5ನೇ ತರಗತಿಯಲ್ಲಿ ಕಲಿಯುತ್ತಿದ್ದ. ಶನಿವಾರ ಮಧ್ಯಾಹ್ನ ಸ ಒಕೆಶಾಲೆ ಬಿಟ್ಟ ಮೇಲೆ ಸುಮಾರು 12.30 ಗಂಟೆಯಿಂದ ನಾಪತ್ತೆಯಾಗಿದ್ದು, ಅಪಹರಣದ ಶಂಕೆ ವ್ಯಕ್ತವಾಗಿದೆ. ಆದರೆ ಮುಲ್ಕಿ ಪೊಲೀಸರು ನಾಪತ್ತೆ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದು, ಶಾಲೆಯ ಪಕ್ಕದಲ್ಲಿರುವ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ  ಅಂಗಡಿಗಳಲ್ಲಿ ಹಾಕಿರುವ ಸೀಸಿ ಕ್ಯಾಮರಾದಲ್ಲಿ ಪರಿಶೀಲಿಸಿದಾಗ ಬಾಲಕ ಬೆಳ್ಮಣ್ಣು ಬಸ್ ಹತ್ತಿದ ಬಗ್ಗೆ  ಗೊತ್ತಾಗಿದೆ ಎಂದು ತಿಳಿಸಿದ್ದಾರೆ.