ಕಿನ್ನಿಗೋಳಿ ಸೊಸೈಟಿ ದರೋಡೆ ಬೇಧಿಸಲು ಇನ್ನೆಷ್ಟು ದಿನ ಬೇಕು

ವರ್ಷದ ಹಿಂದೆ ಪಡುಪಣಂಬೂರಿನ ರಾಷ್ಟ್ರೀಯ ಹೆದ್ದಾರಿ ಬದಿ ಕೊಲೆಯಾದ ಮಹಿಳೆಯ ಶವ, ಕಿನ್ನಿಗೋಳಿ ಗೋಲ್ಡ್ ಸ್ಮಿತ್ ಸೊಸೈಟಿ ಕೋಟಿ ನಗ ನಗದು ಲೂಟಿ  ಪಕ್ಷಿಕೆರೆ ಮನೆ ದರೋಡೆ ಪ್ರಕರಣಗಳು ಹಳ್ಳ ಹಿಡಿಯುತ್ತಿದ್ದು ಆರೋಪಿಗಳನ್ನು ಪತ್ತೆ ಹಚ್ಚಲು ಇದುವರೆಗೂ ಮೂಲ್ಕಿ ಪೊಲೀಸರಿಂದ ಆಗಿಲ್ಲ
ಮೂಲ್ಕಿಗೆ ಹೊಸ ಇನ್ಸ್‍ಪೆಕ್ಟರ್ ಬಂದಾಗಿನಿಂದ ಪರಿಸ್ಥಿತಿ ಸುಧಾರಿಸಬಹುದೆಂಬ ಜನತೆಗೆ ಇದ್ದ ಆಶಾಭಾವನೆಯೂ ಕಳಚಿದೆ
ಠಾಣೆಯಲ್ಲಿ ಯಾವುದೇ ವಿಚಾರದಲ್ಲಿ ಪ್ರಕರಣ ದಾಖಲಾದರೂ ಯಾವುದೂ ದಡ ಸೇರುತ್ತಿಲ್ಲ  ಎಲ್ಲದರಲ್ಲಿಯೂ ನಿರಾಪರಾಧಿಗಳನ್ನು ಟಾರ್ಗೆಟ್ ಮಾಡಿ ರಾಜಿ ಪಂಚಾಯತಿಗೆ ಮೂಲಕ ತಮ್ಮ ಪಾಲನ್ನು ಜೇಬಿಗಿಳಿಸಿಕೊಂಡು ಸುಮ್ಮನಿದ್ದರೆ ಅಮಾಯಕರಿಗೆ ನ್ಯಾಯ ಸಿಗುವುದಾದರೂ ಹೇಗೆ ಸ್ವಾಮಿ

  • ಎಂ ರಾಮಚಂದ್ರ ಸಾಲ್ಯಾನ್  ಮೂರುಕಾವೇರಿ