ಮೆಗಾ ಶೋ ಹೆಸರಿನಲ್ಲಿ ಹಣ ಸಂಗ್ರಹ : ಸಂಘಟನೆಯ ರೂವಾರಿ ಪೆÇಲೀಸ್ ವಶಕ್ಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮೆಗಾ ಶೋ ಹೆಸರಿನಲ್ಲಿ ವಾಹನಕ್ಕೆ ಪ್ರೆಸ್ ಸ್ಟಿಕ್ಕರ್ ಅಂಟಿಸಿ ಹಣ ಸಂಗ್ರಹಿಸಿ ವಂಚಿಸುತ್ತಿದ್ದವರ ಬಗ್ಗೆ ಪತ್ರಕರ್ತರು ಪೆÇಲೀಸರಿಗೆ ನೀಡಿದ ಮಾಹಿತಿಯನ್ವಯ ಸಂಘಟನೆಯ ಸದಸ್ಯನೊಬ್ಬನನ್ನು ಪೆÇಲೀಸರು ಸೆರೆ ಹಿಡಿದು ಎಚ್ಚರಿಸಿ ಬಿಡುಗಡೆಗೊಳಿಸಿದ್ದಾರೆ. ಪ್ರಕರಣದಲ್ಲಿ ಕೋಟ್ಟಾಚೇರಿ ನವರಂಗ್ ಬಿಯರ್ ಪಾರ್ಲರ್ ಮ್ಯಾನೇಜರ್ ಹಾಗು ಪಳ್ಳಿಕೋತ್ ಮಧುರಿಕಟ್ಟ ನಿವಾಸಿ ತರುಣ್ ಎಂಬಾತನನ್ನು ಪೆÇಲೀಸರು ವಶಕ್ಕೆ ತೆಗೆದು ಬಳಿಕ ಬಿಡುಗಡೆಗೊಳಿಸಿದ್ದಾರೆ.

ತರುಣ್ ಮಾಲಕತ್ವದಲ್ಲಿರುವ ಕೆ ಎಲ್ 60 ಎಲ್ 6700 ನೋಂದಾವಣೆಯ ಬೈಕಿಗೆ ನಕಲಿ ಪ್ರೆಸ್ ಸ್ಟಿಕ್ಕರ್ ಅಂಟಿಸಲಾಗಿತ್ತು. ಭಾರೀ ವಂಚನೆ ನಡೆದ ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬನಾಗಿದ್ದ ತರುಣ್.

ಪತ್ರಕರ್ತರ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಸುವುದಾಗಿ ಹೇಳಿ ಹಲವರಿಂದ ಹಣ ಕಬಳಿಸಿರುವುದಾಗಿ ಹೇಳಲಾಗಿದೆ. ಕಾಞಂಗಾಡ್ ಆಕಾಶ್ ಕನ್ವೆನ್ಶನ್ ಸೆಂಟರಿನಲ್ಲಿ ಮೆಗಾ ಶೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಊರಿನ ಕೆಲವೊಂದು ಮಂದಿ ಪತ್ರಕರ್ತರ ಗಮನಕ್ಕೆ ತಂದಾಗ ಪತ್ರಕರ್ತರು ಪ್ರೆಸ್ ಕ್ಲಬ್ಬಿಗೆ ಹಾಗೂ ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಂತೆ ಕಾರ್ಯಾಚರಣೆ ನಡೆದಿದೆ. ಈ ಹಿನ್ನೆಲೆಯಲ್ಲಿ ಪ್ರೆಸ್ ಸ್ಟಿಕರ್ ಅಂಟಿಸಿ ದುರುಪಯೋಗ ನಡೆಸುವವವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈ ಗೊಳ್ಳುವಂತೆ ಕಾಸರಗೋಡು ಪೆÇಲೀಸ್ ವರಿಷ್ಟಾಧಿಕಾರಿ ಎಲ್ಲಾ ಠಾಣೆಗಳಿಗೂ ಆದೇಶ ನೀಡಿದ್ದಾರೆ.