11 ತಿಂಗಳ ಅಪಹೃತ ಮಗು ರಕ್ಷಣೆ

ಚೆನ್ನೈ : ಇಲ್ಲಿನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯ ಹಿಂದಿರುವ ದಕ್ಷಿಣ ಮಿಂಟ್ ರಸ್ತೆಯ ಜೋಪಡಿಯಿಂದ ಮೂವರು ಮಹಿಳೆಯರ ಗ್ಯಾಂಗೊಂದು ಅಪಹರಿಸಿದ್ದ ಮಗುವೊಂದನ್ನು ಪೊಲೀಸರು 12 ತಾಸಿನ ಕಾರ್ಯಾಚರಣೆಯಲ್ಲಿ ರಕ್ಷಿಸಿದ್ದಾರೆ. ಸರ್ಫಿಯಾ (52) ಎಂಬಾಕೆ 11 ತಿಂಗಳ ಮಗುವನ್ನು ಅಪಹರಿಸಿ ಕನ್ನಗಿ ನಗರದ ಮನೆಯೊಂದರಲ್ಲಿ ಬಚ್ಚಿಡಲು ಪ್ರಯತ್ನಿಸಿದ್ದು, ಈ ಬಗ್ಗೆ ಪೊಲೀಸರಿಗೆ ರಿಕ್ಷಾ ಚಾಲಕರು ಮತ್ತು ಎಂಟಿಸಿ ಚಾಲಕರೊಬ್ಬರು ಮಾಹಿತಿ ನೀಡಿದ್ದರು. ಬಳಿಕ ಸರ್ಫಿಯಾ ಮತ್ತು ಆಕೆಯ ನೆರೆಮನೆಯ ವನಿತಾ (35) ಎಂಬಾಕೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನೊಬ್ಬ ಮಹಿಳೆಗಾಗಿ ಶೋಧ ಮುಂದುವರಿದಿದೆ.