ಕಿಕ್-2 : ಜಾಕ್ಲಿನ್ ಔಟ್, ದೀಪಿಕಾ ಇನ್

ಕೊನೆಗೂ ಸಲ್ಮಾನ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಜೊತೆಯಾಗಿ ತೆರೆಯ ಮೇಲೆ ಬರುವುದು ಪಕ್ಕಾ ಆಗಿದೆ ಎನ್ನುವ ಲೇಟೆಸ್ಟ್ ಸುದ್ದಿ ಮುಂಬೈ ಮಾಯಾನಗರಿಯಿಂದ ಬಂದಿದೆ.

ಸಲ್ಮಾನ್ ಖಾನನನ್ನು `ಕಿಕ್’ ಚಿತ್ರ ಬಾಲಿವುಡ್ಡಿನ ಸುಲ್ತಾನನನ್ನಾಗಿ ಮಾಡಿತ್ತು. ಜಾಕ್ಲಿನ್ನಿಗೆ ಕೂಡಾ ಆ ಸಿನಿಮಾದಿಂದಲೇ ಸ್ಟಾರ್ ಪಟ್ಟ ಸಿಕ್ಕಿತ್ತು. ಆ ಬ್ಲಾಕ್ ಬಸ್ಟರ್ ಚಿತ್ರದಲ್ಲಿ ಜಾಕ್ಲಿನ್ ಜೊತೆಗಿನ ಸಲ್ಮಾನ್ ಕೆಮೆಸ್ಟ್ರಿಯನ್ನು ಕೂಡಾ ಪ್ರೇಕ್ಷಕ ಬಹುವಾಗಿ ಮೆಚ್ಚಿಕೊಂಡಿದ್ದ. ಈಗ ಕೆಲವು ಸಮಯಗಳಿಂದ `ಕಿಕ್-2′ ಚಿತ್ರ ಬರುತ್ತದೆ ಎನ್ನುವ ಸುದ್ದಿ ಕೇಳಿಬರುತ್ತಲೇ ಇತ್ತು. ಅದೀಗ ಪಕ್ಕಾ ಆಗಿದೆಯಂತೆ. ಆದರೆ ಈ ಬಾರಿ ಸಲ್ಮಾನ್ ಜೊತೆಯಾಗುತ್ತಿರುವುದು ಜಾಕ್ಲಿನ್ ಅಲ್ಲ, ಬದಲಾಗಿ ದೀಪಿಕಾ ಪಡುಕೋಣೆ ಎನ್ನಲಾಗಿದೆ. ಆದರೆ ಈ ಸುದ್ದಿಯನ್ನು ಇದುವರೆಗೆ ಅಧಿಕೃತವಾಗಿ ಪ್ರಕಟಿಸಿಲ್ಲ. ಇದುವರೆಗೆ ದೀಪಿಕಾಗೆ ಸಲ್ಮಾನ್ ಜೊತೆ ನಟಿಸುವ ಅವಕಾಶ ಸಿಕ್ಕಿರಲಿಲ್ಲ. ಆಕೆಗೂ ಸಲ್ಲು ಜೊತೆ ನಟಿಸುವ ಆಸೆ ಇದೆ ಎಂದು ಹಲವಾರು ಬಾರಿ ಹೇಳಿದ್ದಳು. ಪ್ರೇಕ್ಷಕರಿಗೂ ತೆರೆಮೇಲೆ ಅವರ ಕೆಮಸ್ಟ್ರಿ ನೋಡು ವಾಸೆಯಂತೂ ಇದ್ದೇ ಇದೆ.