ಬರಲಿದೆ `ಕೆಂಪೇಗೌಡ 2′

2012 ರಲ್ಲಿ ಬಿಡುಗಡೆ ಆದ ಕಿಚ್ಚ ಸುದೀಪ್ ಸ್ವತಃ ನಿರ್ದೇಶಿಸಿ ರಾಗಿಣಿ ದ್ವಿವೇದಿ ಜೊತೆ ಅಭಿನಯಿಸಿದ್ದ `ಕೆಂಪೇಗೌಡ’ ಚಿತ್ರ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ್ದು ಎಲ್ಲರಿಗೂ ತಿಳಿದಿದೆ. ಇದೀಗ `ಕೆಂಪೇಗೌಡ 2′ ಚಿತ್ರ ತೆರೆಗೆ ತರುವ ಬಗ್ಗೆ ತೆರೆಯ ಮರೆಯಲ್ಲಿ ಚರ್ಚೆ ನಡೆಯುತ್ತಿದೆ. `ಕೆಂಪೇಗೌಡ 2′ ಚಿತ್ರ ನಿರ್ಮಿಸಲು `ಹೆಬ್ಬುಲಿ’ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಉಮಾಪತಿ ಶ್ರೀನಿವಾಸ್ ಮುಂದೆ ಬಂದಿದ್ದು, ಸುದೀಪ್ ಕೂಡಾ ಈ ಬಗ್ಗೆ ಪಾಸಿಟಿವ್ ಆಗಿದ್ದಾನೆ ಎಂಬ ಸುದ್ದಿ ಗಾಂಧೀನಗರದಿಂದ ಬಂದಿದೆ.

ಸದ್ಯ `ಜೋಗಿ’ ಪ್ರೇಮ್ ನಿರ್ದೇಶನದ `ದಿ ವಿಲನ್’ ಚಿತ್ರದಲ್ಲಿ ಶಿವರಾಜ ಕುಮಾರ್ ಜೊತೆ ನಟಿಸುತ್ತಿದ್ದು ಅದಾದ ಮೇಲೆ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾಗಳಲ್ಲಿ ಅಭಿನಯಿಸಲು ಕಮಿಟ್ ಆಗಿರುವುದರಿಂದ `ಕೆಂಪೇಗೌಡ 2′ ಚಿತ್ರ ವರ್ಷಾಂತ್ಯಕ್ಕೆ ಪ್ರಾರಂಭವಾಗುವ ನಿರೀಕ್ಷೆ ಇದೆ.

`ಕೆಂಪೇಗೌಡ’ ಸಿನಿಮಾ `ಸಿಂಗಂ’ ಚಿತ್ರದ ರಿಮೇಕ್ ಆಗಿತ್ತು. ಆದರೆ `ಕೆಂಪೇಗೌಡ -2′ ರಿಮೇಕ್ ಆಗಿರದೇ ಸ್ವಮೇಕ್ ಆಗಿ ಬರಲಿದ್ದು ಇದಕ್ಕೆ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಬರೆಯಲಿದ್ದಾರೆಯಂತೆ. ಸುದೀಪ್ ಸ್ವತಃ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಾನೆ ಎನ್ನಲಾಗಿದೆ.