ಕಿಚ್ಚನ ಮನಮೋಹಕ ಭರತನಾಟ್ಯ !

ಇದೀಗ ಎಲ್ಲೆಡೆ `ಹೆಬ್ಬುಲಿ’ಯ ಘರ್ಜನೆಯದ್ದೇ ಸದ್ದು. ಹೌದು, ಕಿಚ್ಚ ಸುದೀಪ್ ಅಭಿನಯದ `ಹೆಬ್ಬುಲಿ’ ಬರುವ ವಾರ ರಿಲೀಸ್ ಆಗುತ್ತಿದ್ದು ದಿನದಿಂದ ದಿನಕ್ಕೆ ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಾಗುತ್ತಿದೆ. ಮೊನ್ನೆಯಷ್ಟೇ ಚಿತ್ರದ ಟೈಟಲ್ ವಿಡಿಯೋ ಸಾಂಗ್ ಬಿಡುಗಡೆ ಆಗಿದ್ದು ಸಿನಿರಸಿಕರು ಅದರ ಗುಂಗಿನಲ್ಲಿ ಇರುವಾಗಲೇ ಈಗ ಇನ್ನೊಂದು ರೊಮ್ಯಾಂಟಿಕ್ ಸಾಂಗ್ ಹೊರಬಿದ್ದಿದೆ. ವಿಶೇಷ ಅಂದರೆ ಈ ಹಾಡಿನಲ್ಲಿ ಸುದೀಪ್ ಭರತನಾಟ್ಯ ಶೈಲಿಯಲ್ಲಿ ಕುಣಿದಿದ್ದು ಅವನ ಅಭಿಮಾನಿಗಳು ಇದರಿಂದ ಬಹಳ ಥ್ರಿಲ್ ಆಗಿಬಿಟ್ಟಿದ್ದಾರೆ. `ಸುಂದರಿ ಸುಂದರಿ’ ಎಂದು ಶುರುವಾಗುವ ಈ ಹಾಡಿನಲ್ಲಿ ನಾಯಕಿ ಅಮಲಾ ಪೌಲ್ ಕೂಡಾ ಸುದೀಪ್ ಜೊತೆ ಸ್ಟೆಪ್ಸ್ ಹಾಕಿದ್ದಾಳೆ. ಈ ವೀಡಿಯೋ ವ್ಯಾಲೆಂಟೈನ್ಸ್ ಡೇ ರಾತ್ರಿ ಬಿಡುಗಡೆಯಾಗಿದ್ದು ರಾತ್ರಿ ಬೆಳಗಾಗುವುದರೊಳಗೇ 1 ಲಕ್ಷಕ್ಕೂ ಅಧಿಕ ಜನ ಹಾಡನ್ನ ವೀಕ್ಷಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ `ಸುಂದರಿ’ ಹಾಡನ್ನ ವಿಜಯ ಪ್ರಕಾಶ್ ಮತ್ತು ಅನುರಾಧ ಭಟ್ ಹಾಡಿದ್ದಾರೆ.

ಒಂದಾದ ಮೇಲೊಂದರಂತೆ ಹಾಡಿನ ವೀಡಿಯೋ ಯೂ ಟ್ಯೂಬಿನಲ್ಲಿ ಅಪ್ಲೋಡ್ ಮಾಡುತ್ತಿದ್ದು ಕೊನೆಯಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡಕ್ಕಿದೆಯಂತೆ. ಕೃಷ್ಣ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ದೇಶದಾದ್ಯಂತ 500ಕ್ಕೂ ಅಧಿಕ ಸ್ಕ್ರೀನಿನಲ್ಲಿ ಪ್ರದರ್ಶನಗೊಳ್ಳಲಿದೆ. ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಎರಡನೇ ಬಾರಿಗೆ ಸುದೀಪ್ ಜೊತೆ ತೆರೆಹಂಚಿಕೊಂಡಿದ್ದಾರೆ.