ನಾಟೆಕಲಿನಲ್ಲಿ ಮಸೀದಿ, ಅಂಗಡಿಗಳಿಗೆ ಕಲ್ಲೆಸೆದು ಹಾನಿಗೈದ ಪರಿಸರಕ್ಕೆ ಖಾದರ್ ಭೇಟಿ, ಪರಿಶೀಲನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹೊರವಲಯದ ನಾಟೆಕಲ್ ಬಳಿ ಮಸೀದಿ, ಅಂಗಡಿ, ಮನೆಗಳಿಗೆ ಕಲ್ಲೆಸೆದು, ಸೊತ್ತುಗಳಿಗೆ ಹಾನಿ ಮಾಡಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಹಾರ ಖಾತೆ ಸಚಿವ ಯು ಟಿ ಖಾದರಗೆ ಆಗ್ರಹಿಸಿದ್ದಾರೆ.

“ಕಿಡಿಗೇಡಿಗಳು ಉದ್ದೇಶಪೂರ್ವ ಕವಾಗಿ ಈ ಕೃತ್ಯ ಎಸಗಿದ್ದಾರೋ, ಇದರ ಹಿಂದೆ ಯಾರದ್ದಾದರೂ ಕೈವಾಡ ಇದೆಯಾ ಎನ್ನುವ ತನಿಖೆಯನ್ನು ಪೆÇಲೀಸರು ನಡೆಸುತ್ತಿದ್ದು, ಜನರು ಯಾವುದೇ ವದಂತಿಗಳಿಗೆ ಕಿವಿಕೊಡದೆ ಸಂಯಮದಿಂದ ವರ್ತಿಸಬೇಕು” ಎಂದು ಸಚಿವರು ಸ್ಥಳೀಯರಿಗೆ ಮನವಿ ಮಾಡಿದರು.

ನಾಟೆಕಲಿನಲ್ಲಿ ಹಾನಿಗೀಡಾದ ಮಸೀದಿ ಮತ್ತು ಅಂಗಡಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿನ ಪರಿಸರದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಉದ್ದೇಶಪೂರ್ವಕವಾಗಿ ನಿರಂತರ ನಡೆದಿದೆ. ಅಹಿತಕರ ಘಟನೆಗೆ ಊರವರು ಆಸ್ಪದ ನೀಡದೆ ಆರೋಪಿಗಳ ಪತ್ತೆಗೆ ಪೆÇಲೀಸ್ ಇಲಾಖೆಯೊಂದಿಗೆ ಸಹಕರಿಸಿರುವುದು ಶ್ಲಾಘನೀಯವಾಗಿದ್ದು, ಈಗಾಗಲೇ ಮುಖ್ಯಮಂತ್ರಿ ಜಿಲ್ಲಾಡಳಿತಕ್ಕೆ ಇಂತಹ ಘಟನೆಗಳಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರೆ ಎಂದರು.

ಸ್ಥಳೀಯ ಜನಪ್ರತಿನಿಧಿಗಳು, ಮಸೀದಿಯ ಮುಖ್ಯಸ್ಥರು, ನಾಟೆಕಲ್ ವರ್ತಕರು ಉಪಸ್ಥಿತರಿದ್ದರು.

LEAVE A REPLY