`ಸ್ಪರ್ಧೆ ಜನರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೀರುತ್ತದೆ’

ಕಾಸರಗೋಡು : “ಕೇರಳೋತ್ಸವವು ಜನರ ಒಗ್ಗೂಡಿಸುವ ಉತ್ಸವವಾಗಿದೆ. ಎಲೆಮರೆಯ ಪ್ರತಿಭೆಗಳಿಗೆ ಉತ್ತಮ ವೇದಿಕೆ ಅಗಿದೆ. ವಿವಿಧ ಹಂತಗಳಲ್ಲಿ ನಡೆಯುವ ಸ್ಪರ್ಧೆಗಳು ಜನರಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೀರುತ್ತದೆ” ಎಂದು ಹೇಳಿದರು.

ಕೇರಳ ರಾಜ್ಯ ಯುವಜನ ಕ್ಷೇಮ ಬೋರ್ಡಿನ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕುಂಬ್ಡಾಜೆ ಗ್ರಾಮ ಪಂಚಾಯತು ಕೇರಳೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಉತ್ಸವ ಅಕ್ಟೋಬರ್ 15ರವರೆಗೆ ನಡೆಯಲಿರುವುದು. ಈ ಸಂದರ್ಭ ಜನಪ್ರತಿನಿಧಿಗಳ ಸಹಿತ ಹಲವಾರು ಮಂದಿ ಪಾಲ್ಗೊಂಡರು.