ದುಷ್ಕರ್ಮಿಗಳಿಂದ ಹತ್ಯೆಯಾದ ಬಾಲಕನ ತಾಯಿಗೆ ಪ್ರಶಸ್ತಿ ಮೊತ್ತ ನೀಡಿದ ಮಲೆಯಾಳಂ ಸಾಹಿತಿ

ಕರಾವಳಿ ಅಲೆ ವರದಿ

ಕಾಸರಗೋಡು : ಮಲೆಯಾಳಂನ ಖ್ಯಾತ ಸಾಹಿತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಕೆ ಪಿ ರಾಮನ್ಮುಣಿ ತಮಗೆ ಸಿಕ್ಕಿದ ಪ್ರಶಸ್ತಿ ಮೊತ್ತವನ್ನು 2017ರ ಜೂನಿನಲ್ಲಿ ಹತ್ಯೆಗೊಳಗಾದ ಜುನೈದ್ ಖಾನ್ ಎಂಬ ಬಾಲಕನ ತಾಯಿ ಸಾಯಿರಾ ಬೇಗಂಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಹೊಸದಿಲ್ಲಿಯಿಂದ ಮಥುರಾಕ್ಕೆ ಬರುತ್ತಿದ್ದ ರೈಲಿನಲ್ಲಿ ಜುನೈದ್ ಖಾನ್ ಎಂಬ ಬಾಲಕನನ್ನು ಹಿಂದೂ ಪರ ಸಂಘಟನೆಯ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.

ಜುನೈದ್ ಮುಸ್ಲಿಂ ಎನ್ನುವ ಕಾರಣಕ್ಕೆ ಆತನನ್ನು ಹತ್ಯೆ ಮಾಡಲಾಗಿತ್ತು ಎಂದು ರಾಮನ್ಮುಣಿ ಈ ಸಂದರ್ಭ ಹೇಳಿದರು. ದೆಹಲಿಯಿಂದ ಫರೀದಾಬಾದ್‍ನ ತನ್ನ ನಿವಾಸಕ್ಕೆ ತೆರಳುತ್ತಿದ್ದ ರೈಲಿನಲ್ಲಿದ್ದ 15ರ ಹರೆಯದ ಜುನೈದ್‍ನನ್ನು ಕೊಲೆ ಮಾಡಲಾಗಿತ್ತು. ಆತ ಪಾಕಿಸ್ಥಾನಿ, ದನದ ಮಾಂಸ ತಿನ್ನುತ್ತಾನೆ ಎಂದು ಘೋಷಣೆ ಕೂಗಿದ್ದ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.

“ಈ ಪ್ರಶಸ್ತಿ ಮೊತ್ತವನ್ನು ಜುನೈದ್ ತಾಯಿಯ ಪಾದದಲ್ಲಿ ಅರ್ಪಣೆ ಮಾಡುತ್ತೇನೆ. ಆ ದುಷ್ಟರ ಪ್ರಾಯಶ್ಚಿತ್ತಕ್ಕಾಗಿ ಹಣ ಬಳಕೆಯಾಗಲಿ. ನೈಜ ಹಿಂದೂಗಳು ಯಾರೂ ಇಂತಹ ಅಮಾನವೀಯ ಕೃತ್ಯವನ್ನು ಮಾಡಲಾರರು” ಎಂದು ರಾಮನ್ಮುಣಿ ಹೇಳಿದ್ದಾರೆ. ಕೇರಳದಲ್ಲಿ ನಡೆಯುತ್ತಿದ್ದ ಕೋಮುಭಾವನೆಗಳನ್ನು ಕೇಂದ್ರೀಕರಿಸಿಕೊಂಡು ರಾಮನ್ಮಣಿ ಸರಣಿ ಲೇಖನಗಳನ್ನು ಬರೆಯುತ್ತಿದ್ದರು. ಅವರ `ದೈವತಿನೇಟಿ ಪುಸ್ತಕಂ’ ಕೃತಿಗೆ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

 

 

LEAVE A REPLY