ಕೇರಳದಲ್ಲಿ ಆರೆಸ್ಸೆಸ್ ಸಾಮಥ್ರ್ಯ ವೃದ್ಧಿ, ಶಾಖೆಗಳ ಸಂಖ್ಯೆ ಹೆಚ್ಚಳ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಮ್ಯುನಿಸ್ಟ್ ಆಡಳಿತವಿರುವ ಕೇರಳದಲ್ಲಿ ಆರೆಸ್ಸೆಸ್ ಶಾಖೆಗಳ ಸಂಖ್ಯೆ ಪ್ರತಿದಿನ  ಹೆಚ್ಚಾಗುತ್ತಲೇ ಇದೆ ಮತ್ತು ಇದೀಗ ರಾಜ್ಯದಲ್ಲಿ ಐದು ಸಾವಿರ ಶಾಖೆಗಳು ಕಾರ್ಯಾಚರಿಸುತ್ತಿವೆ ಎಂದು ಸಂಘದ ಪ್ರಮುಖರ ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ಎರಡೂ ಪ್ರಬಲವಾಗಿರುವ ಗುಜರಾತ್ ರಾಜ್ಯವೇ ಕೇವಲ 1,000 ಶಾಖೆಗಳನ್ನು ಹೊಂದಿದೆ.

ಕೇರಳ ಮಣ್ಣಿನಲ್ಲಿ ಎಡಪಂಥ ಸೋತ ಬಳಿಕ ಹೆಚ್ಚು ಜನರು ಆರೆಸ್ಸೆಸ್ಸಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಶಾಖೆಗಳು ಹೆಚ್ಚಾಗುತ್ತಿದ್ದು, ಪ್ರಸಕ್ತ ದಿನಕ್ಕೆ 5000ಕ್ಕೂ ಹೆಚ್ಚು ಶಾಖೆಗಳೊಂದಿಗೆ ಆರೆಸ್ಸೆಸ್ ಶಾಖೆಗಳ ಸಂಖ್ಯೆ ವೃದ್ಧಿಯಾಗುತ್ತಿದೆ. ಈ ಪ್ರವೃತ್ತಿ 2010-11ರಿಂದ ಆರಂಭವಾಗಿದೆ.

ಸಂಘವು ದೇಶದಲ್ಲಿ ಶಾಖೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಇದೇ ವೇಳೆ ಬದಲಾವಣೆಯ ಉದ್ದೇಶದಿಂದ ಆರೆಸ್ಸೆಸ್ ತನ್ನ ಚಡ್ಡಿಯನ್ನು ಪ್ಯಾಂಟಿಗೆ ಬದಲಾಯಿಸಿಕೊಂಡಿದೆ ಎಂದು ಆರೆಸ್ಸೆಸ್ ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ ನಂದಕುಮಾರ್ ವಿವರಿಸಿದ್ದಾರೆ.