ಕೇರಳದಲ್ಲಿ ಮದ್ಯಪಾನಿಗಳ ವಯೋಮಿತಿ 21ಕ್ಕೆ ಇಳಿಕೆ

ತಿರುವನಂತಪುರಂ : ಸಿಪಿಎಂ ನೇತೃತ್ವದ ಕೇರಳ ಸರ್ಕಾರ ಮದ್ಯಪಾನಿಗಳ ವಯಸ್ಸಿನ ಕನಿಷ್ಠ ಮಿತಿ 23ರಿಂದ 21ಕ್ಕೆ ಇಳಿಸಲು ಮುಂದಾಗಿದೆ.

ಬುಧವಾರ ನಡೆದ ಸಂಪುಟ ಸಭೆಯಲ್ಲಿ ಅಬಕಾರಿ ಕಾಯ್ದೆಯ ಸಂಬಂಧಿತ ವಿಷಯದಲ್ಲಿ ತಿದ್ದುಪಡಿಗೆ ನಿರ್ಧರಿಸಲಾಗಿದೆ. ಇದಕ್ಕೆ ರಾಜ್ಯಪಾಲರ ಒಪ್ಪಿಗೆ ಅಗತ್ಯವಿದೆ.

ಇದು ಸಿಪಿಎಂ ನೇತೃತ್ವದ ಎಲ್ ಡಿ ಎಫ್ ಚುನಾವಣಾ ಪ್ರಣಾಳಿಕೆಯಾಗಿದೆ. ರಾಜ್ಯದಲ್ಲಿ ಹೊಸ ಅಬಕಾರಿ ನೀತಿಯಂತೆ ಹೆಚ್ಚು ಮದ್ಯವರ್ಜನ ಕೇಂದ್ರಗಳ ಪ್ರಕಟಿಸಿದ್ದು, ಜಾಗೃತಿ ಕಾರ್ಯಕ್ರಮ ಆರಂಭಿಸಲಾಗಿದೆ. ರಾಜ್ಯದಲ್ಲಿ ಶೇ 6 ಮದ್ಯಪಾನ ಚಟ ಹೊಂದಿದವರು ಹಾಗೂ ಶೇ 54 ಮಂದಿ ವಿಪರೀತ ಕುಡುಕರೆಂಬ ಎರಡು ವಿಧವನ್ನು ಸರ್ಕಾರ ಗುರುತಿಸಿದೆ.

ಜೂನಿನಲ್ಲಿ ಬಿಡುಗಡೆಗೊಳಿಸಲಾದ ರಾಜ್ಯ ಮದ್ಯ ನೀತಿಯಲ್ಲಿ 30 ಬಾರುಗಳು, 815 ಬೀರ್ ಬಾರುಗಳು ಮತ್ತು ವೈನ್ ಪಾರ್ಲರುಗಳು, 34 ಕ್ಲಬ್ಬುಗಳು ಮತ್ತು 306 ರಾಜ್ಯ ಸ್ವಾಮ್ಯದ 306 ಚಿಲ್ಲರೆ ಮದ್ಯ ಮಾರಾಟದಂಗಡಿಗಳು ಒಳಗೊಂಡಿದೆ.