ಕೇರಳ ಮಹಿಳಾ ಸಂಘದಿಂದ ಕಾಸರಗೋಡಲ್ಲಿ ಒಕ್ಕೂಟ ಸಭೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : `ನಾವು ಸ್ತ್ರೀಯರಿಗೂ ಮಕ್ಕಳಿಗೂ ಕಾವಲುಗಾರರಾಗುತ್ತೇವೆ’ ಎಂಬ ಘೋಷಣೆಯೊಂದಿಗೆ ಕೇರಳ ಮಹಿಳಾ ಸಂಘಟನೆ ಎನ್ ಎಫ್ ಐ ಡಬ್ಲ್ಯು ಇದರ ನೇತೃತ್ವದಲ್ಲಿ ಮಹಿಳಾ ಒಕ್ಕೂಟದ ಸಭೆ ನಡೆಯಿತು.

ಮರದಡಿಯಲ್ಲಿ ನಡೆದ ಕಾರ್ಯಕ್ರಮವನ್ನು ಸಿಪಿಐ ಜಿಲ್ಲಾ ಕಾರ್ಯದರ್ಶಿ ನ್ಯಾಯವಾದಿ ಗೋವಿಂದನ್ ಪಳ್ಳಿಕಾಪಿಲ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಕೃತ್ಯಗಳನ್ನು ಹತ್ತಿಕ್ಕಲು ಹಲವಾರು ಕಾನೂನುಗಳಿವೆ. ಆದರೆ ಇವೆಲ್ಲವನ್ನೂ ಗಾಳಿಗೆ ತೂರಿ ಸ್ತ್ರೀಯರ ಹಾಗು ಮಕ್ಕಳ ವಿರುದ್ದ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಲವಾರು ಮಂದಿ ಪಾಲ್ಗೊಂಡು ಈ ಒಕ್ಕೂಟಕ್ಕೆ ಮತ್ತಿಷ್ಟು ಬಲ ತುಂಬಿದ್ದಾರೆ.