ಜಿಲ್ಲಾ ಕೇರಳ ಕಲೋತ್ಸವಕ್ಕೆ ಚಾಲನೆ

bty

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕಾಸರಗೋಡು ಜಿಲ್ಲಾ ಪಂಚಾಯತಿ ಹಾಗೂ ರಾಜ್ಯ ಯುವಜನ ಕ್ಷೇಮ ಬೋರ್ಡ್ ನವೆಂಬರ್ 19ರ ತನಕ ನಡೆಸಲಿರುವ ಜಿಲ್ಲಾ ಕೇರಳ ಕಲೋತ್ಸವಕ್ಕೆ ಉಪ್ಪಳದಿಂದ ಚಾಲನೆ ದೊರಕಿತು.

ಕೈಕಂಬದಿಂದ ಉಪ್ಪಳಕ್ಕೆ ನಡೆದ ವಿಜೃಂಭಣೆಯ ಸಾಂಸ್ಕೃತಿಕ ಘೋಷಯಾತ್ರೆಯನ್ನು ಭಾರತದ ಪುಟ್ಬಾಲ್ ಮಾಜಿ ಕಪ್ತಾನ ಹಾಗೂ ಮಲಪ್ಪುರಂ ಎಂಎಸ್ಪಿ ಕಮಾಂಡರ್ ಡಿವೈಎಸ್ಪಿ ಶರಫಲಿ ಧ್ವಜ ಹಸ್ತಾಂತರಿಸಿ ಚಾಲನೆ ನೀಡಿದರು.

ಉಪ್ಪಳ ಕೈಕಂಬದಿಂದ ಆರಂಭಗೊಂಡ ಜಾಥಾ ಉಪ್ಪಳ ಜಂಕ್ಷನಿನಲ್ಲಿ ಸಮಾಪ್ತಿಗೊಂಡಿತು. ಇಂದಿನಿಂದ ಮಂಜೇಶ್ವರ ಉಪ್ಪಳ ಪರಿಸರದ ವಿವಿಧ ಭಾಗಗಳಲ್ಲಿ ಕೇರಳೋತ್ಸವ ನಡೆಯಲಿದೆ. ಪ್ರತಿಭವಾಂತ ವಿದ್ಯಾರ್ಥಿಗಳನ್ನು ಸಮಾಜದ ಮುಂದೆ ತರಲು ಕೇರಳ ಸರಕಾರ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಕೇರಳೋತ್ಸವ ಅದರಲ್ಲೊಂದಾಗಿದೆ.