ಹಕ್ಕು ಉಲ್ಲಂಘನೆ ವಿರುದ್ಧ ಯೂತ್ ವಿಂಗ್ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕೇರಳ ಕಾಂಟ್ರಾಕ್ಟರ್ಸ್ ಯೂತ್ ವಿಂಗ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಹಕ್ಕು ಉಲ್ಲಂಘನೆಯ ವಿರುದ್ದ ಪ್ರತಿಭಟನಾ ಮೆರವಣಿಗೆ ನಡೆಯಿತು.

ಕಾಸರಗೋಡು ಲೋಕೋಪ ಯೋಗಿ ಇಲಾಖೆ ಕಚೇರಿ ಎದುರು ನಡೆದ ಮೆರವಣಿಗೆಯಲ್ಲಿ ಹಲವಾರು ಮಂದಿ ಪಾಲ್ಗೊಂಡಿದ್ದಾರೆ. ಕಚೇರಿ ಮುಂಭಾಗದಲ್ಲಿ ನಡೆದ ಧರಣಿಯನ್ನು ಸರಕಾರಿ ಗುತ್ತಿಗೆದಾರರ ಅಸೋಸಿಯೇಶನಿನ ರಾಜ್ಯ ಉಪಾಧ್ಯಕ್ಷ ಮೊಯಿದೀನ್ ಕುಟ್ಟಿ ಹಾಜಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು “ಹಲವು ಕಡೆಗಳಿಂದ ಕಾಡಿ ಬೇಡಿ ಸಾಲ ಪಡೆದು ವ್ಯಾಪಾರ ನಡೆಸುತ್ತಿರುವ ಗುತ್ತಿಗೆದಾರರಿಗೆ ನೀಡುತ್ತಿರುವ ತೊಂದರೆಗಳನ್ನು ಕೊನೆಗಾಣಿಸಬೇಕಾಗಿದೆ. ಇದೇ ರೀತಿ ಮುಂದುವರಿದರೆ ಹಲವು ಗುತ್ತಿಗೆದಾರರು ಬೀದಿಪಾಲಾಗುವ ಸಾಧ್ಯತೆ ಹೆಚ್ಚು. ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರು ಗುತ್ತಿಗೆದಾರರೊಂದಿಗೆ ಕೂಲಂಕುಷವಾದ ಚರ್ಚೆ ನಡೆಸಿ ಅದಕ್ಕೊಂದು ಪರಿಹಾರವನ್ನು ಕಾಣಬೇಕಾಗಿದೆ” ಎಂದಿದ್ದಾರೆ.