ನಗರದಲ್ಲಿ ಸಂಚರಿಸುತ್ತಿದ್ದ ಹಲವು ಕೇರಳ ಬಸ್ಸುಗಳು ಮುಟ್ಟುಗೋಲು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೇರಳದ ರಿಜಿಸ್ಟ್ರೇಷನ್ ಹೊಂದಿರುವ, ಕೇರಳದ ಮಾಲಕತ್ವದ ಖಾಸಗಿ ಬಸ್ಸುಗಳು ನಗರದಲ್ಲಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ತುರ್ತು ಕಾರ್ಯಾಚರಣೆ ನಡೆಸಿದ ಪೊಲೀಸರು ಹಲವು ಬಸ್ಸುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಕಳೆದೊಂದು ವಾರದಿಂದ ಈ ಕಾರ್ಯಾಚರಣೆಯನ್ನು ಪೊಲೀಸರು ಮತ್ತು ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮೂಲಕ ನಡೆಸುತ್ತಿದ್ದಾರೆ. ಎರಡು ದಿನಗಳ ಹಿಂದೆ ನಾಗುರಿಯಲ್ಲಿರುವ ಕಂಕನಾಡಿ ನಗರ ಠಾಣೆಯಲ್ಲಿ ಬಸ್ಸುಗಳನ್ನು ತಂದಿರಿಸಲಾಗಿತ್ತು ಎನ್ನುವ ದೂರು ವ್ಯಕ್ತವಾಗಿತ್ತು.

ಖಾಸಗಿ ಬಸ್ಸುಗಳು ಯಾವುದೇ ದಾಖಲೆ, ಅನುಮತಿ ಮತ್ತು ಸಾರಿಗೆ ಶುಲ್ಕ ಪಾವತಿಸದೆ ಮಂಗಳೂರಿನಿಂದ ಕೇರಳ ಕಡೆಗೆ ಅಕ್ರಮವಾಗಿ ಸಾರಿಗೆ ಸಂಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಬಸ್ ಮಾಲಕರು ಮತ್ತು ಚಾಲಕರು ಪೊಲೀಸರು ಮತ್ತು ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು. ಅಲ್ಲದೆ ಇಂತಹ ಬಸ್ಸುಗಳನ್ನೂ ತಡೆದು ಪೆÇಲೀಸರಿಗೆ ಒಪ್ಪಿಸಿದ್ದರು.

ಈ ವಾಹನಗಳು ಶುಲ್ಕ ನೀಡದೆ ಮಂಗಳೂರಿನಿಂದ ಕೇರಳ ಕಡೆಗೆ ಸಂಚಾರ ನಡೆಸುತ್ತಿವೆ. ಇದರಿಂದ ಇತರ ಬಸ್ ಚಾಲಕ/ಮಾಲಕನಿಗೆ ತೊಂದರೆ ಉಂಟಾಗಿದ್ದು, ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಮಕರ ಜ್ಯೋತಿ ವೀಕ್ಷಣೆ ಅಯ್ಯಪ್ಪ ಮಾಲಾಧಾರಿಗಳು ಇದೇ ಅವಧಿಯಲ್ಲಿ ಸಂಚರಿಸುತ್ತಿರುವ ಸಂದರ್ಭವಾಗಿರುವುದರಿಂದ ಸಹಜವಾಗಿಯೇ ಅವರು ಇಲ್ಲಿನ ವಾಹನವನ್ನು ಬುಕ್ ಮಾಡಿಕೊಂಡು ಹೋಗುತ್ತಿದ್ದಾರೆ. ಇದು ಸ್ಥಳೀಯ ಬಸ್ ಮಾಲಕರ ಕೆಂಗಣ್ಣಿಗೆ ಗುರಿಯಾಗಿದೆ.

LEAVE A REPLY