ನೋಟು ಅಮಾನ್ಯ 8 ಲಕ್ಷ ಕೋಟಿ ರೂ ಹಗರಣ : ಕೇಜ್ರಿ

ನವದೆಹಲಿ : ನರೇಂದ್ರ ಮೋದಿ ಸರಕಾರದ ನೋಟು ಅಮಾನ್ಯ ನಿರ್ಧಾರವು ರೂ 8 ಲಕ್ಷ ಕೋಟಿ ಮೌಲ್ಯದ ಹಗರಣವಾಗಿದ್ದು ಬ್ಯಾಂಕುಗಳು ವಸೂಲಾತಿ ಮಾಡಲಾಗದ ದೊಡ್ಡ ಕುಳಗಳಿಗೆ ನೀಡಿದ ಸಾಲಗಳನ್ನು ರದ್ದುಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.         “ವಸೂಲಾತಿ ಮಾಡಲಾಗದ ಸಾಲಗಳನ್ನು ಜನರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಹಿಂದಕ್ಕೆ ಪಡೆಯಲಾಗುತ್ತಿದೆ. ಈ ನೋಟು ಅಮಾನ್ಯ ನಿರ್ಧಾರವನ್ನು ಬಿಜೆಪಿ ಮಂದಿಗೆ ಮೊದಲೇ ತಿಳಿಸಲಾಗಿತ್ತು. ಅವರು ತಮ್ಮೆಲ್ಲಾ ಹಣವನ್ನು ಠೇವಣಿಯಿಟ್ಟರಲ್ಲದೆ ಭೂಮಿಯನ್ನೂ ಖರೀದಿಸಿದ್ದರು” ಎಂದು ಕೇಜ್ರಿವಾಲ್ ಹೇಳಿಕೊಂಡಿದ್ದಾರೆ. “ಸರಕಾರದ ಕ್ರಮದಿಂದ ಕಾಳಧನಿಕರು ಬಾಧಿತರಾಗಿಲ್ಲ, ದೇಶವನ್ನು ಕೊಳ್ಳೆ ಹೊಡೆಯುವವರನ್ನಾದರೂ ಸರಕಾರ ಹಿಡಿಯಬೇಕು” ಎಂದು ಕೇಜ್ರಿವಾಲ್ ಹೇಳಿದರು.