`ಮಾಂಸಾಹಾರ, ಸೆಕ್ಸ್ ದೂರ ಮಾಡಿ; ಸುಂದರ ಫೋಟೋಗಳನ್ನು ನೋಡಿ’

ಸಾಂದರ್ಭಿಕ ಚಿತ್ರ

ಗರ್ಭಿಣಿಯರಿಗೆ ಆಯುಷ್ ಇಲಾಖೆಯ ಸಲಹೆಗಳಿವು

ನವದೆಹಲಿ : “ಮಾಂಸ, ಮೀನು, ಮೊಟ್ಟೆಗಳನ್ನು ದೂರ ಮಾಡಿ, ಮಲಗುವ ಕೋಣೆಯಲ್ಲಿ ಸುಂದರ ಫೋಟೋಗಳನ್ನು ನೇತಾಡಿಸಿ ಹಾಗೂ ಲೈಂಗಿಕ ಬಯಕೆಗಳಿಂದ ದೂರವಿರಿ” ಇವು ಗರ್ಭಿಣಿಯರಿಗೆ ಆಯುಷ್ ಸಚಿವಾಲಯ ನೀಡುವ ಸಲಹೆ !

ಇಂತಹ ಹಲವು ಸಲಹೆಗಳನ್ನೊಳಗೊಂಡ ಹಾಗೂ ಆಯುಷ್ ಸಚಿವಾಲಯದ ಅಧೀನದಲ್ಲಿ ಬರುವ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಯೋಗ ಎಂಡ್ ನೇಚುರೋಪತಿ ತಯಾರಿಸಿರುವ ಈ ಪುಸ್ತಿಕೆ ಹಲವರ ಹುಬ್ಬೇರಿಸಿದೆ.

ಈ ಪುಸ್ತಿಕೆಯು ಗರ್ಭಿಣಿ ಮಹಿಳೆಯರಿಗೆ ಮನಸ್ಸು ಹಾಗೂ ದೇಹವನ್ನು ಶಾಂತಗೊಳಿಸುವುದೆಂದು ಹೇಳಲಾದ ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸುವಂತೆ ಸಲಹೆ ನೀಡುತ್ತದೆಯಲ್ಲದೆ ಗರ್ಭಿಣಿಯರು ಮಹಾಪುರುಷರ ಜೀವನದ ಬಗೆಗಿನ ಪುಸ್ತಕಗಳನ್ನು ಓದಬೇಕು ಹಾಗೂ ಮನಸ್ಸಿನಲ್ಲಿ ಆಧ್ಯಾತ್ಮಿಕ ಭಾವನೆಗಳನ್ನು ತುಂಬಬೇಕು ಎಂದು ಹೇಳಿದೆ. ಮಲಗುವ ಕೋಣೆಯಲ್ಲಿ ಸುಂದರ ಫೋಟೋಗಳನ್ನು ತೂಗು ಹಾಕಿದರೆ ಅದು ಮಗುವಿನ ಮೇಲೆ ಕೂಡ ಒಳ್ಳೆಯ ಪರಿಣಾಮ ಬೀರುವುದು ಎಂದು ಫೆಬ್ರವರಿ 2017ರಲ್ಲಿ ಮುದ್ರಣಗೊಂಡು ಜೂನ್ 21ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಕಳೆದ ವಾರ ಆಯುಷ್ ಸಚಿವ ಶ್ರೀಪಾದ್ ಯಸ್ಸೋ ನಾಯ್ಕ್ ಅವರಿಂದ ಬಿಡುಗಡೆಗೊಂಡ ಈ ಪುಸ್ತಿಕೆ ಹೇಳುತ್ತದೆ.

ಆದರೆ ಅಲೋಪತಿ ವೈದ್ಯರು ಮಾತ್ರ ಆಯುಷ್ ಇಲಾಖೆಯ ಸಲಹೆಗಳನ್ನು ಒಪ್ಪುವುದಿಲ್ಲ. “ಗರ್ಭಿಣಿ ಮಹಿಳೆಯರಿಗೆ ಮಾಂಸಾಹಾರಿ ಆಹಾರ ಸೇವಿಸಬಾರದೆಂಬ ನಿಯಮವೇನಿಲ್ಲ. ಮಟನ್ ತಿಂದರೆ ದೇಹ ತೂಕ ಹೆಚ್ಚಾಗುವುದೆಂಬ ಕಾರಣಕ್ಕೆ ಅದನ್ನು ದೂರವಿರಿಸಲು ಸಲಹೆ ನೀಡಲಾಗುವುದಾದರೂ, ಚಿಕನ್, ಮೊಟ್ಟೆ, ಫಿಶ್ ತಿನ್ನುವುದಕ್ಕೆ ಯಾವುದೇ ಅಡ್ಡಿ ಇಲ್ಲ” ಎಂದು ಗಂಗಾ ರಾಮ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಮಾಲಾ ಶ್ರೀವಾಸ್ತವ ಹೇಳುತ್ತಾರೆ.

ಗರ್ಭಿಣಿÉಯರಿಗೆ ಅವರ ಲೈಂಗಿಕ ಬಯಕೆಗಳನ್ನು ಹತ್ತಿಕ್ಕುವಂತೆಯೂ ಹೇಳಬಾರದೆಂದು ಫೆಡರೇಶನ್ ಆಫ್ ಒಬ್ಸ್ಟೆಟ್ರಿಕ್ ಎಂಡ್ ಗೆÉೈನಕಾಲಜಿಕಲ್ ಸೊಸೈಟೀಸ್ ಆಫ್ ಇಂಡಿಯಾದ ಸುರಕ್ಷಿತ ತಾಯ್ತನ ಸಮಿತಿ ಅಧ್ಯಕ್ಷ ನಾರಾಯಣನ್ ಪಳನಿಯಪ್ಪನ್ ವಿವರಿಸುತ್ತಾರೆ.