ಕೇದರನಾಥ್ : ಹಿಂದೂ-ಮುಸ್ಲಿಂ ನಡುವಿನ ಪ್ರೇಮಕತೆ

ಸುಶಾಂತ್ ಸಿಂಗ್ ರಜಪೂತ್ ಹಾಗೂ ಮೊದಲ ಬಾರಿಗೆ ಸಿನಿಲ್ಯಾಂಡಿಗೆ ಕಾಲಿಟ್ಟ ಸೈಫ್ ಆಲಿ ಖಾನ್-ಅಮೃತಾ ಸಿಂಗ್ ಪುತ್ರಿ ಸಾರಾ ಆಲಿ ಖಾನ್ ನಟಿಸುತ್ತಿರುವ `ಕೇದರನಾಥ್’ ಚಿತ್ರವೊಂದು ಹಿಂದೂ-ಮುಸ್ಲಿಂ ಲವ್ ಸ್ಟೋರಿಯಾಗಿದೆ. ಚಿತ್ರದಲ್ಲಿ ಸುಶಾಂತ್ ಸಾಮಾನ್ಯ ಮುಸ್ಲಿಂ ಯುವಕನ ಪಾತ್ರ ಮಾಡುತ್ತಿದ್ದರೆ ಸಾರಾ ಚಿತ್ರದಲ್ಲಿ ಪೊಲಿಟಿಕಲ್ ಕನೆಕ್ಷನ್ ಕೂಡಾ ಇರುವ ಶ್ರೀಮಂತ ಹಿಂದೂ ಮುಖಂಡರ ಮಗಳ ಪಾತ್ರದಲ್ಲಿ ನಟಿಸಲಿದ್ದಾಳೆ.

ಸುಶಾಂತ್ ಹಾಗೂ ಸಾರಾ ಕೆಲವು ದಿನಗಳ ಹಿಂದೆ ಜೊತೆಯಾಗಿ ಕೇದರನಾಥ ದೇªಸ್ಥಾನಕ್ಕೆ ಹೋಗಿ ಆಶೀರ್ವಾದ ಪಡೆದಿದ್ದಾರೆ. ಈ ಹಿಂದೆ `ಫಿತೂರ್’ ಚಿತ್ರ ನಿರ್ದೇಶಿಸಿದ್ದ ಅಭಿಷೇಕ್ ಕಪೂರ್ `ಕೇದರನಾಥ್’ ಸಿನಿಮಾದ ಡೈರೆಕ್ಟರ್. ಚಿತ್ರದ ಶೂಟಿಂಗ್ ಈಗಾಗಲೇ ಕೇದರನಾಥದ ಸುತ್ತಮುತ್ತಲಿನ ಸುಂದರತಾಣದಲ್ಲಿ ಶುರುವಾಗಿದೆ. ಸಿನಿಮಾದಲ್ಲಿ ಗಟ್ಟಿ ಚಿತ್ರಕತೆ ಇದ್ದು ಇದೊಂದು ಹಿಟ್ ಚಿತ್ರವಾಗಲಿದೆ ಎನ್ನುವ ಭಾರೀ ನಿರೀಕ್ಷೆ ಚಿತ್ರತಂಡದ್ದು. ಅದೂ ಅಲ್ಲದೇ ಸ್ಟಾರ್ ಕಿಡ್ ಸಾರಾ ಮೊದಲ ಬಾರಿಗೆ ಚಿತ್ರರಂಗ ಪ್ರವೇಶಿಸುತ್ತಿರುವುದರಿಂದ ಚಿತ್ರದ ಬಗ್ಗೆ ಈಗಾಗಲೇ ಹೈಪ್ ಕೂಡಾ ಜಾಸ್ತಿ ಇದೆ.