`ಅಲ್ಪರು ವಿರೋಧಿಗಳನ್ನು ಗನ್ ಮೂಲಕ ಮೌನವಾಗಿಸುತ್ತಿದ್ದಾರೆ’

ಪತ್ರಕರ್ತೆ-ಕಾರ್ಯಕರ್ತೆ ಗೌರಿ ಲಂಕೇಶರ ಕ್ರೂರ ಹತ್ಯೆಯ ಹಿನ್ನೆಲೆಯಲ್ಲಿ ಸಹೋದರಿ ಕವಿತಾ ಲಂಕೇಶ್ ಪತ್ರಿಕೆ ಮತ್ತು ಕುಟುಂಬವನ್ನು ಏಕತೆಯಿಂದ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಅವರೊಂದಿಗೆ ಮಾತುಕತೆ :

  • ಗೌರಿ ಗುಂಡಿನ ದಾಳಿಗೆ ಬಲಿಯಾದ ನಂತರದಲ್ಲಿ ಬದುಕು ಬಹು ಕÀಷ್ಟವಾಗಿರಬಹುದು ?

ಇನ್ನೂ ನಾವು ಅದರಿಂದ ಹೊರಬರಲಾಗಿಲ್ಲ. ದುಃಖಿಸಲೂ ಸಮಯವಿರಲಿಲ್ಲ. ಆಕೆ ನನ್ನ ಪ್ರಿಯ ಸ್ನೇಹಿತೆ, ಆತ್ಮಗೆಳತಿಯಾಗಿದ್ದಳು. ನಾನು ಗೌರಿಯ ದೇಹವನ್ನು ಗುಂಡಿನ ದಾಳಿಯ ನಡುವೆ ನೋಡಿದಾಗ ಬಹಳ ದುಃಖವಾಗಿತ್ತು. ಆದರೆ ಪ್ರತಿಭಟನೆಗೆ ಬಂದ ಜನರನ್ನು ಕಂಡು ಆಶ್ಚರ್ಯವೂ ಆಗಿದೆ. ನನ್ನ ತಂದೆ ಗೌರಿಗಿಂತ ಹೆಚ್ಚು ದಿಟ್ಟವಾಗಿ ಬೆಂಕಿಯುಗುಳುವ ಪತ್ರಕರ್ತರಾಗಿದ್ದರು. ತಮ್ಮ ಆಡಳಿತ ವಿರೋಧಿ ನಿಲುವಿನ ಹೊರತಾಗಿಯೂ ಅವರಿಗೆ ಬೆದರಿಕೆಗಳು ಇರಲಿಲ್ಲ. ಕಳೆದ ಐದು ಅಥವಾ ಏಳು ವರ್ಷಗಳಲ್ಲಿ ನಮ್ಮ ದೇಶವು ಅಸಹಿಷ್ಣುವಾಗಿದೆ ಮತ್ತು ಕೋಮುವಾದಿಗಳು ಎಲ್ಲರೂ ಅವರ ಧ್ವನಿಯಲ್ಲಿ ಮಾತನಾಡಬೇಕು ಎಂದು ಬಯಸಿದ್ದಾರೆ.

  • ಗೌರಿ ನಿಮ್ಮ ತಂದೆಯನ್ನು ನಕಲಿ ಮಾಡಲು ಹೋಗಿದ್ದರೇ ?

ಗೌರಿ ಮತ್ತು ನನ್ನ ಸಹೋದರ ತಂದೆಯ ಪತ್ರಿಕೆಯನ್ನು ನಡೆಸುವ ಜವಾಬ್ದಾರಿ ಹೊತ್ತರು. ಗೌರಿ ಉದಾರವಾಗಿ ಮತ್ತು ಎಡಪಂಥೀಯ ಧೋರಣೆಯುಳ್ಳವಳಾದರೂ ನನ್ನ ತಂದೆಯಂತೆಯೇ ಮೃದು ಮಾತಿನವಳು. ವೇದಿಕೆಗಳಲ್ಲೂ ಉಗ್ರ ಭಾಷಣ ಮಾಡುತ್ತಿರಲಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದರು. ಗೌರಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಎಂ ಎಂ ಕಲಬುರ್ಗಿ ಅವರ ಕೊಲೆಯ ಅಪರಾಧಿ ಪತ್ತೆಯಾಗದೆ ಇರುವುದನ್ನು ನೆನಪಿಸುತ್ತಲೇ ಇದ್ದರು. ಆದರೆ ಎಂದೂ ತನಗಾಗಿ ಭದ್ರತೆ ಕೇಳಲಿಲ್ಲ.

  • ಬೆದರಿಕೆಗಳು ಇರುವ ಬಗ್ಗೆ ಅವರು ಎಂದಾದರೂ ಹೇಳಿದ್ದರೆ ?

ಯಾರೋ ತನ್ನನ್ನು ಹಿಂಬಾಲಿಸುತ್ತಿರುವ ಬಗ್ಗೆ ಹೇಳಿದ್ದರೂ, ಭದ್ರತೆ ಬೇಕೆಂದು ಎಂದೂ ಗೌರಿಗೆ ಅನ್ನಿಸಿರಲಿಲ್ಲ. ಹಿಂಬಾಲಿಸುವ ವ್ಯಕ್ತಿಯಿಂದ ತನಗೆ ಅಪಾಯವಿದೆಯೆಂದೂ ಯೋಚಿಸಿರಲಿಲ್ಲ.

  • ಪತ್ರಿಕೆಯನ್ನು ಯಾರು ನಡೆಸಲಿದ್ದಾರೆ ?

ಗೌರಿಗೆ ಪತ್ರಿಕೆ ಪ್ರಕಟಿಸುವುದು ಕಷ್ಟವಾಗಿತ್ತು. ಹೀಗಾಗಿ ಅದನ್ನು ಇ-ಪೇಪರ್ ಆಗಿ ಪರಿವರ್ತಿಸುವ ಉದ್ದೇಶ ಹೊಂದಿದ್ದರು. ತಂದೆಯ ಆದರ್ಶಗಳನ್ನು ಮುಂದುವರಿಸುವ ವಿಚಾರದಲ್ಲಿ ಬಹಳ ದೃಢನಿಲುವು ಆಕೆಗಿತ್ತು. ಮುಂದಿನ ಕೆಲವಾರದಲ್ಲಿ ನಾನು ಮತ್ತು ನನ್ನ ತಾಯಿ ಪತ್ರಿಕೆಯನ್ನು ಇ-ಪೇಪರ್ ಆಗಿ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ. ನಾನು ಆಕೆಯ ಸ್ಥಾನದಲ್ಲಿ ನಿಂತು ಪತ್ರಿಕೆ ನಡೆಸಲು ಸಾಧ್ಯವಿಲ್ಲ, ಅಮ್ಮನಿಗೆ ಸಿಬಿಐ ಮತ್ತು ಎಸೈಟಿ ನಡುವೆ ವ್ಯತ್ಯಾಸವೇ ಇತ್ತೀಚೆಗಿನವರೆಗೆ ತಿಳಿದಿರಲಿಲ್ಲ. ಹೀಗಿರುವಾಗ ವೆಬ್ ತಾಣ ಮಾಡುವುದೇ ಉಳಿದ ದಾರಿ.

  • ಗೌರಿಯನ್ನು ಯಾರು ಕೊಂದರು ಎನ್ನುತ್ತೀರಿ ?

ಆಕೆಗೆ ಖಾಸಗಿ ಶತ್ರುಗಳಿರಲಿಲ್ಲ. ಆಕೆಯ ಆದರ್ಶ ಮತ್ತು ನಂಬಿಕೆಗಳಿಂದಾಗಿಯೇ ಸಣ್ಣ ಪ್ರಮಾಣದ ಜನರು ಆಕೆಯ ವಿರೋಧಿಯಾಗಿದ್ದುದೇ ಕಾರಣವಾಗಿರಬಹುದು. ಈ ವಿರೋಧಿಗಳಿಗೆ ಗೌರಿಯ ಕೆಲಸಗಳ ಬಗ್ಗೆ, ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಆಕೆ ಹೋರಾಡಿರುವ ಬಗ್ಗೆಯೂ ಮಾಹಿತಿಗಳಿಲ್ಲ.

  • ಆದರೆ ಗೌರಿ ಸಾಮಾಜಿಕ ಮಾಧ್ಯಮಗಳಲ್ಲಿ ಕಟುಮಾತಿನ ಪೋಸ್ಟುಗಳನ್ನು ಹಾಕುತ್ತಿದ್ದರು ?

ಅದೇ ಕಾರಣವಿರಬಹುದು. ಕಲಬುರ್ಗಿ ಮತ್ತು ಇತರರ ವಿಚಾರದಲ್ಲೂ ಅದೇ ಆಗಿದೆ. ಅಂತ್ಯಕ್ರಿಯೆಗೆ ಬಂದ ವಿದ್ಯಾರ್ಥಿಯೊಬ್ಬರು “ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲವೇ” ಎಂದು ಪ್ರಶ್ನಿಸಿದಾಗ ನನ್ನ ಬಳಿ ಉತ್ತರವಿರಲಿಲ್ಲ. ಈ ಮುಖವಿಲ್ಲದ ಅಲ್ಪಮಂದಿ ನಮ್ಮನ್ನು ಅವರ ಧ್ವನಿಯಲ್ಲಿ ಮಾತಾಡಲು ಒತ್ತಾಯಿಸುತ್ತಿದ್ದಾರೆ. ಮಂಗಳೂರಿನಲ್ಲಿ ನೈತಿಕ ಗೂಂಡಾಗಿರಿ, ದನದ ಮಾಂಸ ತಿನ್ನುವ ವಿಚಾರದ ವಿವಾದ ನೋಡಿ. ಕೆಲವರನ್ನು ದನದ ಮಾಂಸ ತಿಂದದ್ದಕ್ಕಾಗಿಯೇ ಕೊಲೆ ಮಾಡಲಾಗಿದೆ.

  • ಇಂತಹ ಅಸಹಿಷ್ಣುತೆ ಏಕೆ ?

ಮಾಧ್ಯಮಗಳು ಮುಖರಹಿತರನ್ನು ಬೆಂಬಲಿಸುತ್ತಿವೆ ಹಾಗೂ ಗೌರಿ ಮತ್ತು ಇತರರನ್ನು ಮೌನವಾಗಿಸುವುದನ್ನು ಪ್ರೋತ್ಸಾಹಿಸುತ್ತಿವೆ. ಮುದ್ರಣ ಮತು ಮಾಧ್ಯಮದ ಅರ್ಧದಷ್ಟು ಬಲಪಂಥೀಯರ ನಿಯಂತ್ರಣದಲ್ಲಿದೆ. ಸ್ವತಂತ್ರ ಚಿಂತನೆಗಳಿರುವ ಗೌರಿಯಂತಹವರ ಮೇಲೆ ಇವರು ಹರಿಹಾಯುತ್ತಾರೆ.

  • ಗೌರಿ ಕೊಲೆಯಲ್ಲಿ ನಕ್ಸಲರ ಕೈವಾಡವಿದೆ ಎನ್ನಲಾಗುತ್ತಿದೆ…

ನಕ್ಸಲರು ನಗರದೊಳಗ ಬಂದು ಯಾರನ್ನೂ ಕೊಂದಿಲ್ಲ. ಮುಖ್ಯವಾಹಿನಿಗೆ ತಂದಾಗಲೂ ಆಕೆಗೆ ದ್ವೇಷದ ಕರೆಗಳು ಬರಲಿಲ್ಲ. ಆರೋಪಿಗಳ ಬಂಧನವಾಗಬೇಕು. ಗೌರಿಯನ್ನು ನಕ್ಸಲರು ಕೊಂದಿದ್ದಾರೆ ಎನ್ನುವವರಿಗೆ ನಕ್ಸಲ್ ಚಳವಳಿ ಬಗ್ಗೆಯೇ ತಿಳಿದಿಲ್ಲ.

  • ಸುಬ್ರಹ್ಮಣ್ಯಂ ಸ್ವಾಮಿ ಕೊಲೆಗೆ ಗೌರಿ ಮತ್ತು ಇಂದ್ರಜಿತ್ ಶತ್ರುತ್ವ ಕಾರಣ ಎಂದಿದ್ದಾರೆ.

ಕೊಲೆಗಾರರನ್ನು ಅಡಗಿಸುವ ಎಲ್ಲಾ ಪ್ರಯತ್ನಗಳೂ ನಡೆದಿವೆ. ಆಸ್ತಿ ವಿಷಯಗಳು ಬಹಳ ಹಿಂದೆಯೇ ಪರಿಹರಿಸಿರುವಾಗ ಈಗ ಯಾವ ಕಾರಣವಿದೆ ? ನನ್ನ ತಾಯಿಯ ಮನೆಯಲ್ಲಿ ಗೌರಿ ನೆಲೆಸಿದ್ದಳು. ಆಕೆಗೆ ಆಸ್ತಿಯಿದ್ದಲ್ಲಿ ಮಾರಿ ಪತ್ರಿಕೆಗೆ ಹಣ ಹಾಕುತ್ತಿದ್ದಳು. ಇಂದ್ರಜಿತ್ ಮತ್ತು ಗೌರಿ ಪರಸ್ಪರರ ನಂಬಿಕೆಗಳನ್ನು ಗೌರವಿಸುತ್ತಿದ್ದರು. ಕೊಲೆ ಮಾಡುವಂತಹ ಆಳವಾದ ಭಿನ್ನಾಭಿಪ್ರಾಯ ಅವರಲ್ಲಿ ಇರಲಿಲ್ಲ.

  • ರಾಜ್ಯ ಸರ್ಕಾರ ಅಪರಾಧಿಯನ್ನು ಕಂಡುಹಿಡಿಯುವ ಭರವಸೆ ಇದೆಯೆ ?

ಎಸೈಟಿ ಅಧಿಕಾರಿಗಳು ನಮಗೆ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗೆ ಇಡೀ ಕುಟುಂಬ ಗೊತ್ತು. ಗೌರಿ ಅವರಿಗೆ ಮಗಳಂತೆ ಇದ್ದಳು. ಸಿಬಿಐಗೆ ಪ್ರಕರಣ ಕೊಡಬೇಕೆನ್ನುವ ಇಂದ್ರಜಿತ್ ಹೇಳಿಕೆಯ ಬಗ್ಗೆ ಹೆಚ್ಚು ಆಲೋಚಿಸುವ ಅಗತ್ಯವಿಲ್ಲ. ಸಿಬಿಐ ಎಲ್ಲಾ ಪ್ರಕರಣಗಳನ್ನು ಪರಿಹರಿಸಿದೆ ಎಂದೇನಿಲ್ಲ. ಎಸೈಟಿಗೆ ಸ್ವಲ್ಪ ಕಾಲಾವಕಾಶ ಕೊಡಲು ಬಯಸಿದ್ದೇವೆ.