ಕಾಪು, ಬೈಂದೂರು ತಾಲೂಕು ನಾಳೆ ಕಾರ್ಯರೂಪಕ್ಕೆ

Àಮ್ಮ ಪ್ರತಿನಿಧಿ ವರದಿ

ಉಡುಪಿ : ಹೊಸದಾಗಿ ರಚಿಸಲಾದ ಕಾಪು ಮತ್ತು ಬೈಂದೂರು ತಾಲೂಕು ಅಧಿಕೃತ ತಾಲೂಕಾಗಿ ಫೆಬ್ರವರಿ 14ರಿಂದ ಕಾರ್ಯಾರಂಭಿಸಲಿದೆ. ಅವುಗಳನ್ನು ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಲಿದ್ದಾರೆ.
ಶನಿವಾರ ಉಚ್ಚಿಲದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ, “ಫೆಬ್ರವರಿ 14ರಂದು ಮಧ್ಯಾಹ್ನ 3 ಗಂಟೆಗೆ ಕಾಪುವಿನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಹೊಸ ಕಾಪು ತಾಲೂಕಿನ ಕಾರ್ಯಾರಂಭಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಶೀಘ್ರದಲ್ಲೇ ಹೊಸ ತಾಲೂಕಿಗೆ ಪೂರ್ಣ ಪ್ರಮಾಣದ ತಹಶೀಲ್ದಾರರನ್ನು ನೇಮಿಸಲಾಗುವುದು. ನಾವು ಈಗಾಗಲೇ ಕಾಪುವಿನಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಮತ್ತು ಮಿನಿ ವಿಧಾನಸೌಧ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದೇವೆ. ಶೀಘ್ರದಲ್ಲೇ ಈ ಎರಡೂ ಪ್ರಸ್ತಾವನೆಗಳಿಗೆ ಸಂಸತ್ತು ಅನುಮತಿ ನೀಡಲಿದೆ ಎಂಬ ಭರವಸೆ ನಮಗಿದೆ. ಅನುಮತಿ ದೊರೆತ ತಕ್ಷಣ ಅಡಿಗಲ್ಲು ಹಾಕಲಿದ್ದೇವೆ” ಎಂದು ಹೇಳಿದ್ದಾರೆ.
ಹೊಸ ಬೈಂದೂರು ತಾಲೂಕು ಫೆಬ್ರವರಿ 14ರಂದು ಬೆಳಿಗ್ಗೆ 11 ಗಂಟೆಗೆ ಬೈಂದೂರು ವಿಶೇಷ ತಹಶೀಲ್ದಾರ್ ಕಚೇರಿ ಪ್ರಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆರಂಭವಾಗಲಿದೆ. ಈ ತಾಲೂಕು ಚಟುವಟಿಕೆಯನ್ನೂ ಕಾಗೋಡು ತಿಮ್ಮಪ್ಪರು ಉದ್ಘಾಟಿಸಲಿದ್ದಾರೆ. ಶಾಸಕ ಕೆ ಗೋಪಾಲ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

LEAVE A REPLY