ಮೂಗುತಿ ಸುಂದರಿಯಾದ ಕತ್ರೀನಾ

ಕತ್ರೀನಾ ಕೈಫ್ ಫೊಟೋಶೂಟ್ ಯಾವಾಗಲೂ ಡಿಫ್ರೆಂಟ್ ಆಗಿರುತ್ತದೆ. ಆಕೆಯ ಸ್ಟೈಲ್ ಎಂತವರನ್ನೂ ಮರಳುಮಾಡುವಂತಿರುತ್ತದೆ. ಈ ಬಾರಿಯೂ ಕತ್ರೀನಾಳ ಫೊಟೋಶೂಟ್ ಗಮನಸೆಳೆಯುವಂತಿದೆ.

ಕತ್ರೀನಾ ಈ ತಿಂಗಳ `ಹಾರ್ಪರ್ ಬಜಾರ್ ಬ್ರೈಡ್ಸ್’ ಮ್ಯಾಗಸೀನಿನ ಕವರ್ ಗರ್ಲಾಗಿ ಕಾಣಿಸಿಕೊಂಡಿದ್ದು ಆಕೆಯ ಲುಕ್ ಮೋಡಿ ಮಾಡುವಂತಿದೆ. ದೊಡ್ಡ ಮೂಗುತಿ, ಕೆಂಪು ಬಿಂದಿ, ಜೊತೆಗೇ ಡೀಪ್ ನೆಕ್ ರೆಡ್ ಗೌನಿನಲ್ಲಿ ಆಕೆ ಬಹಳ ಹಾಟ್ ಆಗಿ ಕಾಣಿಸುತ್ತಿದ್ದಾಳೆ. ಹಲವು ವರ್ಷಗಳ ಹಿಂದೆ ಲಂಡನ್ನಿನಿಂದ ಮುಂಬೈಗೆ ಶಿಫ್ಟ್ ಆಗಿ ಇಲ್ಲಿ ಈಗ ದೊಡ್ಡ ಸ್ಟಾರ್ ಸ್ಟೇಟಸ್ ಪಡೆದಿರುವ ಕತ್ರೀನಾ ತನ್ನ ಸಿನಿಮಾಗಳ ಜೊತೆಜೊತೆಗೇ ತನ್ನ ಸ್ಟೈಲ್ ಸ್ಟೇಟ್ಮೆಂಟಿಂದಲೂ ಗಮನ ಸೆಳೆಯುತ್ತಿರುತ್ತಾಳೆ. ಆಕೆಗೆ ವೆಸ್ಟರ್ನ್ ಜೊತೆಗೆ ಇಂಡಿಯನ್ ಔಟ್ ಫಿಟ್ ಕೂಡಾ ಚೆನ್ನಾಗಿ ಹೊಂದುವುದು ಇನ್ನೊಂದು ಗ್ರೇಟ್ ಪ್ಲಸ್ ಪಾಯಿಂಟ್.

ಅಂದ ಹಾಗೆ ಕತ್ರೀನಾಳ ಈ ಮೂಗುತಿಯ ಲುಕ್ ಆಕೆ ಆಮೀರ್ ಜೊತೆ ನಟಿಸುತ್ತಿರುವ `ಥಗ್ಸ್ ಆಫ್ ಹಿಂದೋಸ್ತಾನ್’ ಗೆಟಪ್ಪಿರಬಹುದು ಎನ್ನುವ ಮಾತೂ ಕೇಳಿಬರುತ್ತಿದೆ. ಸದ್ಯ ಆಕೆ ಆಮೀರ್ ಚಿತ್ರವಲ್ಲದೇ ಇನ್ನಿಬ್ಬರು ಸೂಪರ್ ಖಾನ್ಸ್ ಚಿತ್ರಗಳಲ್ಲಿಯೂ ನಟಿಸುತ್ತಿದ್ದಾಳೆ. ಸಲ್ಮಾನ್ ಖಾನ್ ಜೊತೆ `ಟೈಗರ್ ಜಿಂದಾ ಹೈ’ ಹಾಗೂ ಶಾರೂಕ್ ಖಾನ್ ಜೊತೆ `ಡ್ವಾರ್ಫ್’ ಚಿತ್ರದಲ್ಲಿಯೂ ಆಕೆ ಹಿರೋಯಿನ್.