ಐಶ್ವರ್ಯ ನರಿಯಂತೆ ಕತ್ರೀನಾ ಉವಾಚ

ಕತ್ರಿನಾ ಕೈಫ್ ರಣಬೀರ್ ಕಪೂರ್ ಜೊತೆ `ಜಗ್ಗಾ ಜಾಸೂಸ್’ ಚಿತ್ರದಲ್ಲಿ ನಟಿಸಿದ್ದು ಈಗ ಆ ಸಿನಿಮಾದ ಪ್ರಮೋಶನ್ನಿನಲ್ಲಿ ಈ ಮಾಜಿ ಪ್ರೇಮಿಗಳು ತೊಡಗಿಕೊಂಡಿದ್ದಾರೆ. ಈ ಸಮಯದಲ್ಲಿ ಕತ್ರಿನಾ ಕೈಫ್ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಬಗ್ಗೆ ಅವಮಾನಕಾರೀ ಸ್ಟೇಟ್‍ಮೆಂಟ್ ನೀಡಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ.

`ಜಗ್ಗಾ ಜಾಸೂಸ್’ ಚಿತ್ರದ ಪ್ರಮೋಶನ್ ಭಾಗವಾಗಿ ಕಳೆದ ವಾರ ಕತ್ರಿನಾ-ರಣಬೀರ್ ಫೇಸ್ ಬುಕ್ ಲೈವ್‍ನಲ್ಲಿ ಬಂದಿದ್ದರು. ಈ ವೇಳೆ ಅವರಿಬ್ಬರ ಮೋಜು-ಮಸ್ತಿ ಜೋರಾಗಿಯೇ ಇತ್ತು. ಆ ಸಮಯದಲ್ಲಿ ರಣಬೀರ್ ಪ್ರಾಣಿಗಳ ಹೆಸರಿಗೆ ಸೂಕ್ತವಾಗುವ ಸೆಲೆಬ್ರಿಟಿಗಳ ಹೆಸರನ್ನು ಹೇಳಬೇಕು ಎಂದು ಕತ್ರೀನಾಗೆ ಸವಾಲೆಸೆದಿದ್ದ. ರಣಬೀರ್ `ನರಿ’ ಎನ್ನುತ್ತಿದಂತೆ ಕತ್ರಿನಾ ಐಶ್ವರ್ಯ ರೈ ಬಚ್ಚನ್ ಎನ್ನಬೇಕೇ? ಅವಳ ಉತ್ತರ ಕೇಳಿ ಪ್ರೇಕ್ಷಕರಿಗೆ ಮಾತ್ರವಲ್ಲ, ಸ್ವತಃ ರಣಬೀರನಿಗೂ ಶಾಕ್ ಆಗಿತ್ತು. ಕತ್ರಿನಾ ಹಾಗೆ ಹೇಳಲು ಕಾರಣವೇನೋ ಆಕೆಗೇ ಗೊತ್ತು. ಬಹುಶ: ರಣಬೀರ್ ಐಶ್ವರ್ಯಾ ಜೊತೆ `ದಿಲ್ ಹೇ ಮುಶ್ಕಿಲ್’ ಚಿತ್ರದಲ್ಲಿ ರೊಮ್ಯಾಂಟಿಕ್ ಆಗಿ ನಟಿಸಿದ್ದು ಆತನನ್ನು ಚುಚ್ಚುವ ಉದ್ದೇಶ ಇರಬಹುದೇನೋ… ಈ ಹಿಂದೆ ಇಮ್ರಾನ್ ಹಶ್ಮಿ ಐಶ್ವರ್ಯಾಗೆ `ಪ್ಲಾಸ್ಟಿಕ್’ ಎಂದು ಕರೆದು ಸುದ್ದಿಯಲ್ಲಿದ್ದ.

ಫೇಸ್ ಬುಕ್ ಲೈವ್‍ನಲ್ಲಿ ಕತ್ರಿನಾ ರಣಬೀರನ ಬಳಿ `ನಿನ್ನ ಜೀವನದ ಐದು ಪ್ರಮುಖ ವ್ಯಕ್ತಿಗಳು ಯಾರು?’ ಎಂದು ಪ್ರಶ್ನೆ ಕೇಳಿದಾಗ ರಣಬೀರ್ “ಅಪ್ಪ, ಅಮ್ಮ, ಅಕ್ಕನ ಮಗ ಅಯಾನ್, ನಿನಗೆ ಸಂತೋಷ ಆಗುವುದಾದರೆ ನೀನು …. ಆದರೆ ನಾನು ನನ್ನ ಎರಡು ನಾಯಿಗಳು ಎಂದು ಹೇಳಲಿಚ್ಚಿಸುತ್ತೇನೆ” ಎಂದು ಕತ್ರಿನಾಗೆ ಟಾಂಗ್ ನೀಡಿದ್ದ.

“ರಣಬೀರ್ ಜೊತೆ ಮತ್ತೆ ನಟಿಸುವುದಿಲ್ಲ”

ರಣಬೀರ್ ಜೊತೆ ಇನ್ನು ಮುಂದೆಯೂ ನಟಿಸುತ್ತೀರಾ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಕತ್ರೀನಾ “ಇನ್ನು ಮುಂದೆ ಅಂತಹ ಸಾಧ್ಯತೆ ಇಲ್ಲ” ಎನ್ನುವ ಮೂಲಕ ಈ ಪ್ರಮೋಶನ್ ಸಮಯದಲ್ಲಿ ಅವರ ಈ ಆತ್ಮೀಯತೆ ಎಲ್ಲವೂ ಬರೀ ತೋರುಗಾಣಿಕೆಗೆ, ತಮ್ಮ ಕೆಮೆಸ್ಟ್ರಿ ಅದ್ಭುತವಾಗಿದೆ ಎಂದು ಪ್ರೇಕ್ಷಕರಿಗೆ ತೋರಿಸಿಕೊಂಡು ಆ ಮೂಲಕ ಚಿತ್ರ ಹಿಟ್ ಮಾಡುವ ಉದ್ದೇಶ ಅಷ್ಟೇ ಎನ್ನುವುದು ಸಾಬೀತಾಗಿದೆ.