ಅವ್ಯವಹಾರಕ್ಕೆ ಸಾಕ್ಷಿಯಾದ ಕಟೀಲು ದೇವಳದ ಮಾವುತ ಅಸ್ವಸ್ಥ , ಆಸ್ಪತ್ರೆಗೆ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಟೀಲಿನ ದೇವಳದ ಆನೆ ನೋಡಿಕೊಳ್ಳುವ ಮಾವುತ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ದೇವಳದಲ್ಲಿ ರಾತೋರಾತ್ರಿ ಚಿಲ್ಲರೆಗಳು ಗೋಣಿ ಚೀಲದ ಮೂಲಕ ಹೊರಗಡೆ ಹೋಗುತ್ತಿರುವುದನ್ನು ಈತ ನೋಡಿದಾಗ, ಅದಕ್ಕೆ ಸಂಬಂದಪಟ್ಟವರು ಎಲ್ಲಿ ಈತ ತಮ್ಮ ಗುಟ್ಟನ್ನು ಬಯಲು ಮಾಡುತ್ತಾನೋ ಎಂಬ ಆತಂಕದಿಂದ ಮಾವುತಗೆ ದೇವಳಕ್ಕೆ ಬರದಂತೆ ರಜಾ ನೀಡಲಾಗಿದೆ. ರಜಾ ನೀಡಿದಕ್ಕೆ ಮಾವುತ ಹೋಗಿ ದೇವಳಕ್ಕೆ ಸಂಬಂದಪಟ್ಟವರ ಜೊತೆ ಪ್ರಶ್ನಿಸಿದ್ದಕ್ಕೆ ಕೆಲವರು ಮಾವುತನಿಗೆ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಆದರೆ ಆಗಸ್ಟ್ 1ರಿಂದ ಕೆಲಸಕ್ಕೆ ಬರುವಂತೆ ಹೇಳಲಾಗಿದೆ ಎಂದು ದೇವಳದ ಮೂಲಗಳು ತಿಳಿಸಿದ್ದು, ಇದರಿಂದ ಆಘಾತಗೊಂಡ ಮಾವುತ ತೀವ್ರ ಅಸ್ವಸ್ಥಗೊಂಡಿದ್ದಾನೆನ್ನಲಾಗಿದೆ.

ಕಟೀಲಿನ ಈ ದೇವಳದಲ್ಲಿ ನಡೆಯುತ್ತಿರುವ ಅವ್ಯª Àಹಾರಕ್ಕೆ ಪ್ರಧಾನ ಸಾಕ್ಷಿಯಾಗಿ ಮಾವುತ ಇರುವುದರಿಂದ ಅವರನ್ನು ಕೆಲಸದಿಂದ ವಜಾಮಾಡಲು ಕೆಲವರು ಹೊಂಚು ಹಾಕುತ್ತಿದ್ದಾರೆ. ಈ ನಡುವೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಮಾವುತನಲ್ಲಿ ಮೆದುಳಿನ ರೋಗ ಪತ್ತೆಯಾಗಿದ್ದು, ಗುಣಪಡಿಸಲು ಲಕ್ಷಾಂತರ ರೂ ಅವಶ್ಯಕತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದು, ಇದರಿಂದ ತೀವ್ರ ನೊಂದಿರುವ ಮಾವುತ ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿದ್ದರೂ ದೇವಳದ ಆಡಳಿತ ಮಂಡಳಿ ಕನಿಕರ ತೋರಿಸುತ್ತಿಲ್ಲ ಎಂದು ಆತನ ಸಂಬಂಧಿಗಳು ಹೇಳಿದ್ದಾರೆ. ಕಟೀಲಿನ ಚಿಲ್ಲರೆ ಅವ್ಯವಹಾರದ ಹಿಂದೆ ಭಾರೀ ರಾಜಕೀಯ ಕುಳಗಳು ಸೇರಿಕೊಂಡಿದ್ದು, ಮಾವುತ ಬಲಿಪಶುವಾಗುತ್ತಾನೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.