ಮುಂಬೈ ಫೇಸ್ಬುಕ್ ಕಚೇರಿಯಲ್ಲಿ ಮಂಗಳೂರು ಪೊಲೀಸ್ ವಿಚಾರಣೆ

ಕಟೀಲು ದೇವಿಯ ಅವಹೇಳನ ಪ್ರಕರಣ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಹಳಷ್ಟು ಸಂಚಲನ ಮೂಡಿಸಿ, ಭಾವುಕ ಭಕ್ತಾದಿಗಳ ಆಕ್ರೋಶಕ್ಕೆ ಕಾರಣವಾಗಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಂಗಳೂರು ಸಿಸಿಬಿ ಪೊಲೀಸರು ಮುಂಬೈ ಪೊಲೀಸರ ಸಹಕಾರದೊಂದಿಗೆ ಮುಂಬಯಿಯಲ್ಲಿರುವ ಫೇಸ್ಬುಕ್ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ.

ಆದರೆ ಮೊದಲು ಫೇಸ್ಬುಕ್ ಸಂಸ್ಥೆ ಪೊಲೀಸರ ತನಿಖೆಗೆ ಅಸಹಕಾರ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ವಿದೇಶಕ್ಕೂ ತೆರಳಿ ಕಾನೂನು ಹೋರಾಟಕ್ಕೂ ನಗರ ಪೊಲೀಸರು ಮುಂದಾಗಿದ್ದರು. ಇದೀಗ ಮುಂಬೈಯಲ್ಲಿರುವ ಕಚೇರಿಗೆ ಭೇಟಿ ನೀಡಿರುವ ಮಂಗಳೂರು ಸಿಸಿಬಿ ಪೊಲೀಸರು ಅಲ್ಲಿನ ಸಿಬ್ಬಂದಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.