ಕಟಪಾಡಿ ಪಂಚಾಯತ್ ಬಸ್ ತಂಗುದಾಣ ತಾತ್ಕಾಲಿಕ ಸ್ಥಳಾಂತರ

ಕರಾವಳಿ ಅಲೆ ವರದಿಗೆ ಸ್ಪಂದನೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಕಟಪಾಡಿ ಪೇಟೆ ಸಮೀಪ ಹೆದ್ದಾರಿಯಲ್ಲೇ ಬಸ್ಸುಗಳನ್ನು ನಿಲ್ಲಿಸಿ ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣಿಕರನ್ನು ಹತ್ತಿಸುವುದು-ಇಳಿಸುವುದು ನಡೆಯುತ್ತಿದ್ದು, ಈ ಬಗ್ಗೆ `ಕರಾವಳಿ ಅಲೆ’ ಎಚ್ಚರಿಕೆಯ ವರದಿಯನ್ನು ಪ್ರಕಟಿಸಿದ ಹಿನ್ನಲೆಯಲ್ಲಿ ಸ್ಪಂದಿಸಿದ ಗ್ರಾ ಪಂ ಬಸ್ ತಂಗುದಾಣವನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಗೊಳಿಸಿದೆ.

ಕೆಲ ದಿನಗಳ ಹಿಂದೆ ನಡೆದ ಅಪಘಾತವೊಂದರಲ್ಲಿ ಬಾಲಕಿಯೊಬ್ಬಳು ಮೃತಪಟ್ಟ ಹಿನ್ನೆಲೆಯಲ್ಲಿ, ಕಟಪಾಡಿ ಮುಖ್ಯ ಬಸ್ ತಂಗುದಾಣದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ವರದಿಯನ್ನು `ಕರಾವಳಿ ಅಲೆ’ ಪ್ರಕಟಿಸಿದ್ದು, ಈ ಬಗ್ಗೆ ಗ್ರಾ ಪಂ ಸ್ಪಂದಿಸಿದ್ದರಿಂದ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಸರ್ವಿಸ್ ರಸ್ತೆಯನ್ನೇ ಪಾರ್ಕಿಂಗ್ ಸ್ಥಳವಾಗಿ ಮಾರ್ಪಾಟು ಮಾಡಿದ ವಾಹನಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವ ಮೂಲಕ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವಂತೆ ಪೊಲೀಸ್ ಇಲಾಖೆಯನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ.