ಕಾಶ್ಮೀರದ ಮದರಸ, ಮಸೀದಿಗಳಲ್ಲಿ ಉಗ್ರರÀ ತಯಾರಿ : ಸೇನಾ ಮುಖ್ಯಸ್ಥ

ನವದೆಹಲಿ : ಜಮ್ಮು-ಕಾಶ್ಮೀರಾದ ಮಸೀದಿಗಳು ಮತ್ತು ಮದರಸಗಳಲ್ಲಿ ಭಯೋತ್ಪಾದಕರನ್ನು ತಯಾರಿಸಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳು ಈ ಪರಿಸ್ಥಿತಿ ಇನ್ನಷ್ಟು ಬಿಗಾಡಾಯಿಸುವಂತೆ ಮಾಡಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.  “ಕಣಿವೆ ರಾಜ್ಯದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತಪ್ಪು ಪಾಠ ಹೇಳಿ ಕೊಡಲಾಗುತ್ತಿದೆ. ಶಿಕ್ಷಕರೂ ಮತೀಯ ಭಾವನೆ ಹೊಂದಿದವರಾಗಿದ್ದು, ಶಿಕ್ಷಕರಂತೆ ಮಕ್ಕಳೂ ಬೆಳೆಯುತ್ತಿದ್ದಾರೆ. ಆದ್ದರಿಂದ ಇಲ್ಲಿನ ಶಿಕ್ಷಕ ಪದ್ಧತಿಯನ್ನೇ ಬದಲಿಸಬೇಕು” ಎಂದವರು ಸುದ್ದಿಗಾರರಲ್ಲಿ ತಿಳಿಸಿದರು.

 

LEAVE A REPLY