ಉಗ್ರ ವಾನಿ ಕುಟುಂಬಕ್ಕೆ ಪರಿಹಾರ ನೀಡಲಿರುವ ಕಾಶ್ಮೀರ ಸರಕಾರ

ಶ್ರೀನಗರ : ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ಮುಝಫ್ಫರ್ ವಾನಿಯ ಸಹೋದರನೊಬ್ಬ ಸೇನಾ ಕಾರ್ಯಾಚರಣೆಯಲ್ಲಿ 20 ತಿಂಗಳ ಹಿಂದೆ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ  ಆತನ ಕುಟುಂಬಕ್ಕೆ ಪರಿಹಾರವೊದಗಿಸುವ ಜಮ್ಮು ಕಾಶ್ಮೀರ ಸರಕಾರದ ನಿರ್ಧಾರ  ರಾಜಕೀಯ ವಿವಾದವೊಂದನ್ನು ಹುಟ್ಟು ಹಾಕಿದೆ. ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲವಾದರೂ ಹಾಗೂ ಒಂದು ವಾರದ ತನಕ ಆಕ್ಷೇಪ ಸಲ್ಲಿಸುವ ಅವಕಾಶವಿರುವುದಾದರೂ ಈಗಾಗಲೇ ರಾಜ್ಯದ ಪಿಡಿಪಿ-ಬಿಜೆಪಿ ಸರಕಾರ  ತನ್ನ ಈ ನಿರ್ಧಾರಕ್ಕೆ ಶಿವಸೇನೆ ಮತ್ತು ಇತರ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ಎದುರಿಸಬೇಕಾಗಿ ಬಂದಿದೆ.

ಪುಲ್ವಾಮ ಜಿಲ್ಲೆಯ  ಮ್ಯಾಜಿಸ್ಟ್ರೇಟ್ ಇತ್ತೀಚೆಗೆ ಹಿಂಸಾಚಾರದ ಸಂತ್ರಸ್ತರ 106 ಹೆಸರುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಅದರಲ್ಲಿ ಬುರ್ಹಾನ್  ಹಿರಿಯ ಸಹೋದರ ಖಾಲಿದ್ ಮುಝಫ್ಫರ್ ವಾನಿ  ಹೆಸರು ಒಂಬತ್ತನೇ ಹೆಸರಾಗಿದೆ. ಖಾಲಿದನನ್ನು ಸೇನೆ ಎಪ್ರಿಲ್ 14,2015 ರಂದ ಪುಲ್ವಾಮ ಜಿಲ್ಲೆಯಲ್ಲಿ ಕೊಂದಿತ್ತಾದರೂ, ಆತ ಬುರ್ಹಾನ್ ವಾನಿಯನ್ನು ಭೇಟಿಯಾಗಲು ಯತ್ನಿಸುತ್ತಿದ್ದಾಗ ಆತನಿಗೆ ಗುಂಡಿಟ್ಟು ಎನ್ಕೌಂಟರ್ ಮಾಡಲಾಗಿತ್ತು ಎಂದು ಹೇಳಿಕೊಂಡಿತ್ತು. ಆದರೆ 25 ವರ್ಷದ ಖಾಲಿದನ ಮೃತದೇಹದಲ್ಲಿ ಗುಂಡಿನ ಗಾಯಗಳಿರಲಿಲ್ಲ ; ಬದಲಾಗಿ ಆತನ ಮೇಲೆ ಸೇನೆ ದೌರ್ಜನ್ಯ ನಡೆಸಿದೆ ಎನ್ನುವುದಕ್ಕೆ ಪುರಾವೆಯಾಗಿ ಆತನ ಹಲ್ಲುಗಳು ಮುರಿದಿತ್ತು ಎಂದು ಆತನ ಕುಟುಂಬ ವಾದಿಸಿತ್ತು. ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರದ ಸ್ನಾತ್ತಕೋತ್ತರ ವಿದ್ಯಾರ್ಥಿಯಾಗಿದ್ದ ಖಾಲಿದ್, ಆ ದಿನ ತನ್ನ ಗೆಳೆಯರೊಂದಿಗೆ ಪಿಕ್ನಿಕ್ಕಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದ ಎಂದು ಆತನ ಕುಟುಂಬ ಹೇಳಿತ್ತು.

ಇದೀಗ 20 ತಿಂಗಳುಗಳ ನಂತರ ಸೇನೆಯ ವಾದವನ್ನು ತಿರಸ್ಕರಿಸಿ ರಾಜ್ಯ ಸರಕಾರ ಖಾಲಿದನ ಕುಟುಂಬಕ್ಕೆ ರೂ 4 ¯ಕ್ಷ ಪರಿಹಾರ ಯಾ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಲು ನಿರ್ಧರಿಸಿದೆ.