ಮನೆಗೆ ನುಗ್ಗಿ ಮಹಿಳೆಗೆ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮನೆಗೆ ಅತಿಕ್ರಮಿಸಿ ನುಗ್ಗಿ ಮಹಿಳೆಗೆ ಹಲ್ಲೆಗೈದ ಆರೋಪದಂತೆ ಸಂಬಂಧಿಕನಾದ ಯುವಕನ ವಿರುದ್ಧ ಬದಿಯಡ್ಕ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಬಾಂಜತ್ತಡ್ಕ ಬಳಿಯ ಇಕ್ಕೇರಿ ನಿವಾಸಿ ವಸಂತಿ (50) ಎಂಬವರಿಗೆ ಹಲ್ಲೆಗೈದ ಆರೋಪದಲ್ಲಿ ಸಂಬಂಧಿಕ ಮಂಜುನಾಥ (32) ಎಂಬಾತನ ವಿರುದ್ದ ಕೇಸು ದಾಖಲಿಸಲಾಗಿದೆ. ಏಪ್ರಿಲ್ 2ರಂದು ಮನೆಯಲ್ಲಿ ಏಕಾಂಗಿಯಾಗಿದ್ದ ವೇಳೆ ಅತಿಕ್ರಮಿಸಿ ನುಗ್ಗಿದ ಮಂಜುನಾಥ ಹೊಡೆದು, ತುಳಿದು ಗಾಯಗೊಳಿಸಿದ್ದಾನೆಂದು ವಸಂತಿ ದೂರಿದ್ದಾರೆ. ಗಾಯಗೊಂಡ ಇವರು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.