`ಬಂದರುಗಳ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆ’

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ರಾಜ್ಯದ ಬಂದರುಗಳ ಅಭಿವೃದ್ಧಿಗೆ ಸರಕಾರ ಹಲವು ಯೋಜನೆಗಳನ್ನು ಆವಿಷ್ಕರಿಸಿದೆ ಎಂದು ರಾಜ್ಯ ಬಂದರು ಖಾತೆ ಸಚಿವ ಕಡನ್ನ ಪಳ್ಳಿ ರಾಮಚಂದ್ರನ್ ಹೇಳಿದರು.

ಕಾಸರಗೋಡು ಬಂದರು ಕಚೇರಿ ಮತ್ತು ವಸತಿ ನಿಲಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಉತ್ತರದ ಮಂಜೇಶ್ವರದಿಂದ ತಿರುವನಂತಪುರ ತನಕ ರಸ್ತೆ-ರೈಲು ಸಂಚಾರಕ್ಕೆ ಸಮಾಂತರವಾಗಿ ಹಡಗು ಸಂಚಾರ ಕುರಿತು ಚಿಂತನೆ ನಡೆಸಲಾಗುತ್ತಿದೆ. ಲಕ್ಷದ್ವೀಪಕ್ಕೆ ಸಂಪರ್ಕಿಸುವ ಹಡಗುಯಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಜಿಲ್ಲೆಯ ಆಳಿವೆ ಬಾಗಿಲು ಕೇಂದ್ರೀಕರಿಸಿ ನಡೆಸುತ್ತಿರುವ ಮರಳುಗಾರಿಕೆ ಮಾರಾಟದಿಂದ ತಿಂಗಳಿಗೆ ಒಂದು ಕೋಟಿ ರೂ ಕಾಸರಗೋಡು ಬಂದರು ಕಚೇರಿಗೆ ಲಭಿಸುತ್ತಿದೆ. ಮರಳುಗಾರಿಕೆಗೆ ಮಾಫಿಯಾ ತಂಡ, ಏಜೆನ್ಸಿಗಳಿಗೆ ಅವಕಾಶವಿಲ್ಲ. ಜಿಲ್ಲೆಯ ಪರಂಪರಾಗತ ಮರಳು ಕಾರ್ಮಿಕರಿಗೆ ಉದ್ಯೋಗ ನೀಡಲಾಗುವುದು. ನಿರ್ಮಾಣ ವಲಯಕ್ಕೆ ಅಡ್ಡಿಯಾಗದಂತೆ ಗುಣಮಟ್ಟದ ಮರಳು ಒದಗಿಸಲಾಗುವುದು ಎಂದು ಸಚಿವರು ಹೇಳಿದರು.

 

 

LEAVE A REPLY