ಕಾಸರಗೋಡಿಗನಿಗೆ ದುಬೈಯಲ್ಲಿ ರಾಷ್ಟ್ರೀಯ ದಿನದ ಗೌರವ ಸಲ್ಲಿಕೆ

ದುಬೈಯಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವ ಇಕ್ಬಾಲ್ ಅಬ್ದುಲ್ ಹಮೀದ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಸಾಮಾಜಿಕ ಕಳಕಳಿಯ ಕಾರ್ಯಚಟುವಟಿಕೆಗಳಿಂದ ದುಬೈ ಪೆÇಲೀಸರ ಮನಗೆದ್ದ ಬೇಕಲ ಹದ್ದಾದ್ ನಗರ ನಿವಾಸಿ ಇಕ್ಬಾಲ್ ಅಬ್ದುಲ್ ಹಮೀದನಿಗೆ ದುಬೈ ಪೆÇಲೀಸ್ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.

ಅರಬ್ ಸಂಯುಕ್ತ ರಾಷ್ಟ್ರ ಒಕ್ಕೂಟದ 45ನೇ ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ರಶಿದಿಯಾ ಪೆÇಲೀಸ್ ಠಾಣಾ ಪರಿಸರದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದುಬೈ ಪೆÇಲೀಸ್ ನಿರ್ದೇಶಕ ಪ್ರಶಸ್ತಿ ಪತ್ರವನ್ನು ವಿತರಿಸಿದರು. ಇಕ್ಬಾಲ್ ಅಬ್ದುಲ್ ಹಮೀದನ ಸಮಾಜ ಸೇವೆಯನ್ನು ಗುರುತಿಸಿ ದುಬೈಯಲ್ಲಿ ಗೌರವಿಸಲಾಗಿದೆ.