ದುಬೈಯಲ್ಲಿ ಕಾಸರಗೋಡು ಜನರ ಮೊಬೈಲ್ ಅಂಗಡಿ ಕಳ್ಳ ಬಂಧನ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ದುಬೈಯಲ್ಲಿ ಕಾಸರಗೋಡು ನೆಲ್ಲಿಕುನ್ನು ನಿವಾಸಿಗಳ ಮಾಲಕತ್ವದಲ್ಲಿರುವ ಮೊಬೈಲ್ ಆಕ್ಸರಿಸ್ ಅಂಗಡಿಯಿಂದ ಒಂದು ಕೋಟಿ ಐದು ಲಕ್ಷ ರೂ ವಿವಿಧ ಸಾಮಗ್ರಿಗಳನ್ನು ಕಳವುಗೈದ ಆರೋಪಿಗಳಲ್ಲೊಬ್ಬನಾದ ಕನ್ನೂರು ವಳಪಟ್ಟಣಂ ವಳಪ್ಪಿಲ್ ಪಿಡಿಕೈ ನಿವಾಸಿ ಸವಾದ್ ಎಂಬಾತನನ್ನು ನಗರ ಪೆÇಲೀಸರು ಸೆರೆ ಹಿಡಿದಿದ್ದಾರೆ.

ಪ್ರಕರಣದ ಎರಡನೇ ಆರೋಪಿಯಾಗಿರುವ ಸವಾದನ ಸಹೋದರನೂ ಆಗಿರುವ ಶಹನಾಸ್ ಸೆರೆ ಹಿಡಿಯಲು ಬಾಕಿ ಇರುವ ವ್ಯಕ್ತಿ ಎಂದು ಪೆÇಲೀಸರು ತಿಳಿಸಿದ್ದಾರೆ