ಕಾರವಾರ ನಗರಸಭೆ ಸದಸ್ಯ, ಸ್ಥಳೀಯ ಯುವಕರ ಹೊಡೆದಾಟ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಕ್ಷುಲ್ಲಕ ಕಾರಣಕ್ಕೆ ಬುಧವಾರ ನಗರಸಭೆ ಸದಸ್ಯ ಮತ್ತು ಸ್ಥಳೀಯ ಯುವಕರು ಪರಸ್ಪರ ಹೊಡೆದಾಡಿಕೊಂಡು ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ನಗರಸಭೆ ಸದಸ್ಯ ಮಹೇಶ ತಾಮ್ಸೆ ಮತ್ತು ಅವರ ಸಹೋದರ ಗೌರೀಶ ತಾಮ್ಸೆ ಹಾಗೂ ಸ್ಥಳೀಯ ಯುವಕರಾದ ಸುನಿಲ ತಾಮ್ಸೆ ಮತ್ತು ಸಚಿನ ಎಂಬವರ ನಡುವೆ ಹೊಡೆದಾಟ ನಡೆದು ಆಸ್ಪತ್ರೆ ಸೇರಿದ್ದಾರೆ. ಸೋಮವಾರ ನಡೆದ ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂಬಂಧ ಬುಧವಾರ ಅವರೆಲ್ಲರ ನಡುವೆ ಗಲಾಟೆ ನಡೆದು, ಪರಸ್ಪರ ಹೊಡೆದಾಡಿದ್ದಾರೆ. ಗಾಯಗೊಂಡ ಈ 4 ಜನರು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಕೊನೆಗೆ ಶಹರ ಪೊಲೀಸ್ ಠಾಣೆಗೆ ತೆರಳಿ ಪರಸ್ಪರ ದೂರು ದಾಖಲಿಸಿದ್ದಾರೆ.


ಯುವಕಗೆ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಯುವಕಗೆ ಹಲ್ಲೆಗೈದ ಸಂಬಂಧ ಇಬ್ಬರ ವಿರುದ್ಧ ಮಂಜೇಶ್ವರ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಉಪ್ಪಳ ಬಪ್ಪಾಯಿ ತೊಟ್ಟಿ ನಿವಾಸಿ ಶಬೀರ್ ಅಹಮ್ಮದ್ ಸೈದರ ಪುತ್ರ ಸೈದ್ ಮೊಹಮ್ಮದ್ ಸಿನಾನ(24)ರ ದೂರಿನಂತೆ ಸರ್ಫಾಜ್, ರಮೀಸ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ.

ಸೆಪ್ಟೆಂಬರ್ 5ರಂದು ಮಧ್ಯಾಹ್ನ ಮಣ್ಣಂಗುಳಿಯಲ್ಲಿ ಹಲ್ಲೆಗೈದಿರುವುದಾಗಿ ಸೈದ್ ಮೊಹಮ್ಮದ್ ಸಿನಾನ್ ದೂರಿದ್ದಾರೆ.