ವಿದ್ಯಾಭ್ಯಾಸಕ್ಕೆ ಸರಕಾರದ ನೆರವು : ಕರುಣಾಕರನ್

ಸಂಸದರಿಂದ ಚಾಲನೆ

ನಮ್ಮ ಪ್ರತಿನಿಧಿ ವರದಿ

  ಕಾಸರಗೋಡು : ಗ್ರಾಮೀಣ ಪ್ರದೇಶಗಳ ಜನಸಾಮಾನ್ಯರ ಸೌಕರ್ಯ, ಅವಶ್ಯಕತೆಗಳಿಗೆ ಸರಕಾರಗಳು ಮೀಸಲಿಡುವ ಯೋಜನೆಗಳ ಅನುಷ್ಠಾನದಲ್ಲಿ ಸ್ಥಳೀಯರು ಹೆಚ್ಚು ಮುತುವರ್ಜಿ ವಹಿಸಿ ಕಾಲಕ್ಕನುಗುಣವಾದ ಯೋಜನೆಗಳನ್ನು ಪಡೆದುಕೊಳ್ಳಬೇಕೆಂದು ಸಂಸದ ಕರುಣಾಕರನ್ ತಿಳಿಸಿದರು.

ಬದಲಾಗುತ್ತಿರುವ ಸನ್ನಿವೇಶಕ್ಕೆ ಅನುಸರಿಸಿ ವಿದ್ಯಾಭ್ಯಾಸ ಸೌಕರ್ಯಗಳನ್ನು ಸಾಕಷ್ಟು ಉನ್ನತಿಗೇರಿಸುವ ಬಗ್ಗೆ ಸರಕಾರ ಕಾಲಾಕಾಲಕ್ಕೆ ನೆರವು ನೀಡುವುದೆಂದು ತಿಳಿಸಿದರು. ಉದುಮ ಶಾಸಕರ ನಿಧಿಯಿಂದ ಪಾಂಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಮಂಜೂರುಗೊಳಿಸಿದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತಿದ್ದರು. ಈ ಸಂದರ್ಭ ಶಾಸಕರು, ಜನಪ್ರತಿನಿಧಿಗಳು ಸೇರಿದಂತೆ ಹಲವಾರು ಮಂದಿ ಉಪಸ್ಥರಿದ್ದರು.