ಕರ್ನಾಟಕ ನಿವಾಸಿ ನೇಣು ಬಿಗಿದು ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಜಿಲ್ಲೆಯ ಮೊಗ್ರಾಲ್ ಪುತ್ತೂರು ಚಾಯ್ತೋಟ ಬಾಡಿಗೆ ಮನೆಯೊಂದರಲ್ಲಿ ಕರ್ನಾಟಕ ನಿವಾಸಿಯಾದ ಜಯರಾಂ (24) ಎಂಬ ಯುವಕನೊಬ್ಬ ಮರಕ್ಕೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

mjr8-sucide-karnataka-nivasi

ಸೋಮವಾರ ಮಧ್ಯಾಹ್ನ ಕೆಲಸಕ್ಕೆಂದು ಕೊಠಡಿಯಿಂದ ಹೊರಟವನ್ನು ಬಳಿಕ ಮರಳಿ ಬಂದಿರಲಿಲ್ಲ. ಹುಡುಕಾಡುತ್ತಿರುವ ಮಧ್ಯೆ ಮೊಗ್ರಾಲ್ ಪುತ್ತೂರು ಕಡಪ್ಪುರಂ ತುರ್ತಿಯಲ್ಲಿ ಗಾಳಿಮರವೊಂದಕ್ಕೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರಿಸಲಾಗಿದೆ