8 ಶಾಸಕರಿಗೆ ಲೋಕಾ ನೋಟಿಸು

ಬೆಂಗಳೂರು : 2015-16ರ ಸಾಲಿನಲ್ಲಿ ತಮ್ಮ ಆಸ್ತಿ ವಿವರ ನೀಡಲು ವಿಫಲರಾದ ರಾಜ್ಯದ ಎಂಟು ಮಂದಿ ಶಾಸಕರಿಗೆ ಲೋಕಾಯುಕ್ತ ಅಂತಿಮ ನೋಟಿಸು ಜಾರಿ ಮಾಡಿದೆ. ನೋಟಿಸು ಪಡೆದವರಲ್ಲಿ ತಲಾ ನಾಲ್ವರು ಎಂಎಲ್ಲೆ ಮತ್ತು ಎಂಎಲ್ಸಿಗಳು  ಒಳಗೊಂಡಿದ್ದಾರೆ. ಫಿರೋಜ್ ನಸ್ರುದ್ದೀನ್ ಸೇಠ್ (ಬೆಳಗಾವಿ ದಕ್ಷಿಣ), ರಹೀಂ ಖಾನ್ (ಬೀದರ್), ದೊಡ್ಡಣಗೌಡ ಹನುಮಗೌಡ ಪಾಟೀಲ್ (ಕುಷ್ಠಗಿ) ಮತ್ತು ಶಿವಮೂರ್ತಿ (ಮಾಯಕೊಂಡ) ನೋಟಿಸು ಪಡೆಕೊಂಡ ಶಾಸಕರಾಗಿದ್ದರೆ, ಅಪ್ಪಾಜಿ ಗೌಡ, ಚೌಡ ರೆಡ್ಡಿ, ಕಾಂತರಾಜ್ ಮತ್ತು ಮಲ್ಲಿಕಾರ್ಜುನ ಡಿ ಯು ಎಂಎಲ್‍ಸಿಗಳಾಗಿದ್ದಾರೆ.