ನಾಳೆ ಎಂದಿನಂತೆ ಬ್ಯಾಂಕ್ ಸೇವೆ

ಸಾಂದರ್ಭಿಕ ಚಿತ್ರ

ಬೆಂಗಳೂರು : ನಾಳೆ ಸೋಮವಾರ ರಾಜ್ಯದ ಎಲ್ಲ ಬ್ಯಾಂಕುಗಳು ತೆರೆದಿರುತ್ತವೆ ಮತ್ತು ಎಂದಿನಂತೆ ಗ್ರಾಹಕ ಸೇವೆ ಇದೆ ಎಂದು ಬ್ಯಾಂಕ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸೋಮವಾರ ಕೃಷ್ಣಾಷ್ಟಮಿಯಾಗಿದ್ದು, ದೇಶದ ಇತರ ಭಾಗಗಳಲ್ಲಿ ಬ್ಯಾಂಕುಗಳು ನಾಲ್ಕು ದಿನ ಸತತ ಬಂದ್ ಆಗಿರುತ್ತವೆ. ಆದರೆ ಮಂಗಳವಾರ ರಾಜ್ಯದ ಸಹಿತ ದೇಶದ ಬ್ಯಾಂಕುಗಳು ಸ್ವಾತಂತ್ರ್ಯೋತ್ಸವದಂಗವಾಗಿ ಬಂದ್ ಆಗಲಿವೆ. ಸತತ ನಾಲ್ಕು ದಿನಗಳ ರಜೆಯಲ್ಲಿ ಗ್ರಾಹಕರಿಗೆ ತೊಂದರೆಯಾಗಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಸೋಮವಾರ ಬ್ಯಾಂಕ್ ವ್ಯವಹಾರ ನಡೆಸಲಾಗುತ್ತದೆ ಎಂದವರು ವಿವರಿಸಿದ್ದಾರೆ. ಈ ಎಲ್ಲ ಸಂದರ್ಭದಲ್ಲಿ ಬ್ಯಾಂಕ್ ಎಟಿಎಂ ಮೆಶಿನುಗಳಿಗೆ ಸತತ ಹಣ ಭರ್ತಿ ಮಾಡಲಾಗಿ, ನಗದು ಬಿಕ್ಕಟ್ಟು ತಪ್ಪಿಸಲಾಗುತ್ತದೆ ಎಂದು ಆ ಅಧಿಕಾರಿಗಳು ವಿವರಿಸಿದ್ದಾರೆ.