ಅವಿವಾಹಿತರಿಗೆ ಆಶಾಕಿರಣ ಕಾರ್ಕಳದ ಉಚಿತ ಮ್ಯಾರೇಜ್ ಬ್ಯೂರೋ

ಉಚಿತ ಮ್ಯಾರೇಜ್ ಬ್ಯೂರೋದ ವ್ಯವಸ್ಥಾಪಕ ಶ್ರೀಧರ ಕಾನಂಗಿ

ಇಲ್ಲಿದೆ ಎಲ್ಲಾ ಜಾತಿಯ ವಧುವರರ ಅನ್ವೇಷಣೆ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಮನುಷ್ಯನ ಜೀವನದಲ್ಲಿ ಮದುವೆ ಎನ್ನುವುದು ಅತ್ಯಂತ ಮಹತ್ವದ ಘಟ್ಟ, ನಾನಾ ಕಾರಣದಿಂದ ಸಕಾಲದಲ್ಲಿ ಮದುವೆಯಾಗದೇ ಎಷ್ಟೋ ಯುವಕ-ಯುವತಿಯರ ಪಾಲಿಗೆ ಕಾರ್ಕಳದ ಉಚಿತ ಮ್ಯಾರೇಜ್ ಬ್ಯೂರೋ ಹೊಸ ಆಶಾಕಿರಣ ಮೂಡಿಸಿದೆ. ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿ ಎಂಬಲ್ಲಿ ಶ್ರೀಧರ್ ಎಂಬವರು ಮದುವೆಯಾಗದ ಯುವಕ ಯುವತಿಯರ ಬಾಳಿನಲ್ಲಿ ಹೊಸ ಚೈತನ್ಯ ಮೂಡಿಸಲು ಉಚಿತ ವಿವಾಹ ವೇದಿಕೆ ಎನ್ನುವ ನೂತನ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದಾರೆ.

ಕಳೆದ ಒಂದೂವರೆ ವರ್ಷದ ಹಿಂದೆ ಅಕ್ಷಿತಾ ಮ್ಯಾರೇಜ್ ಬ್ಯೂರೋ ಎನ್ನುವ ಉಚಿತ ವೈವಾಹಿಕ ವೆಬ್ ಸೈಟ್ ಮೂಲಕ ಸುಮಾರು 20ಕ್ಕೂ ಅಧಿಕ ವಿವಾಹಗಳು ನಡೆದಿದ್ದು, ಇಂತಹ ಕೆಲಸಕ್ಕೆ ಅವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸಮಾಜ ಸೇವೆಗೆ ಮುಂದಾಗಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಕಚೇರಿ ತೆರೆದು ಸಿಬ್ಬಂದಿಯನ್ನು ನೇಮಿಸಿ ವಿವಾಹವಾಗಲಿಚ್ಚಿಸುವವರು ಉಚಿತ ನೋಂದಣಿಗಾಗಿ ವೆಬ್ ಸೈಟ್ ಮೂಲಕ ತಮ್ಮ ವಿವಿರಗಳನ್ನು ದಾಖಲಿಸಬಹುದಾಗಿದೆ.

ವಿವಾಹವಾಗಬಯಸುವ ಆಸಕ್ತರು ಇ-ಮೇಲ್ ಮೂಲಕ ತಮ್ಮ ಸ್ವ-ವಿವರವನ್ನೊಳಗೊಂಡ ಮಾಹಿತಿಯನ್ನು ಭಾವಚಿತ್ರದೊಂದಿಗೆ ಕಳುಹಿಸಿಕೊಟ್ಟರೆ ಈ ಮಾಹಿತಿಯನ್ನು ಕಚೇರಿಯ ಸಿಬ್ಬಂದಿ ವೆಬ್ ಸೈಟಿಗೆ ಅಪ್ಲೋಡ್ ಮಾಡುತ್ತಾರೆ.

ಇಂದಿನ ದಿನಗಳಲ್ಲಿ ಕೆಲ ನಿರ್ದಿಷ್ಟ ಸಮುದಾಯಗಳಲ್ಲಿ ವರರ ಕೊರತೆಯಿದ್ದರೆ, ಇನ್ನು ಕೆಲ ಸಮುದಾಯಗಳಲ್ಲಿ ವಧುಗಳ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಇವರೆಲ್ಲರನ್ನೂ ಒಂದೇ ವೇದಿಕೆಯಡಿ ಒಗ್ಗೂಡಿಸಿ ಆ ಮೂಲಕ ಅವಿವಾಹಿತರಿಗೆ ಜೀವನ ಸಂಗಾತಿ ಕಲ್ಪಿಸುವುದೇ ಪ್ರಮುಖ ಉದ್ದೇಶ. ಆರಂಭದಲ್ಲಿ ವಿಶ್ವಕರ್ಮ ಸಮುದಾಯದ ವಧು-ವರರ ಅನ್ವೇಷಣೆಗೆ ತೊಡಗಿಸಿಕೊಂಡ ಶ್ರೀಧರ್, ಪ್ರಸ್ತುತ ಎಲ್ಲಾ ಜಾತಿಯವರಿಗೂ ಇಂತಹ ಅವಕಾಶ ಕಲ್ಪಿಸಿದ್ದಾರೆ.

ಅವಿವಾಹಿತರಿದ್ದು ಮದುವೆಯಾಗಬಯಸುವವರು (08258-282308, 7899969138) ಸಂಪರ್ಕಿಸಬಹುದು. ಇದಲ್ಲದೆ ಶ್ರೀಧರ ಕಾನಂಗಿ, ಕಾನಂಗಿ ಕ್ರಾಸ್, ಹಿರ್ಗಾನ ಪೋಸ್ಟ್, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ-574127 ಈ ವಿಳಾಸಕ್ಕೆ ಸ್ವ-ವಿವರ ಕಳುಹಿಸಿಕೊಡಬಹುವುದಾಗಿದೆ.