ಸ್ಕೂಟರ್ ಸವಾರ ಗಂಭೀರ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಮುಂದಿನಿಂದ ಹೋಗುತ್ತಿದ್ದ ಸ್ಕೂಟರನ್ನು ಬಸ್ ಚಾಲಕ ಓವರ್ಟೇಕ್ ಮಾಡುವಾಗ ಎದುರಿನಿಂದ ಬಂದ ವಾಹನಕ್ಕೆ ಡಿಕ್ಕಿಯಾಗುವುನ್ನು ತಪ್ಪಿಸಲು ಹಠಾತ್ ಎಡಕ್ಕೆ ತಿರುಗಿಸಿದ ಪರಿಣಾಮ ಬಸ್ ಸ್ಕೂಟರಿಗೆ ಡಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಹೆಬ್ರಿಯಲ್ಲಿ ನಡೆದಿದೆ.

ರಾಜು ನಾಯ್ಕ್ ಎಂಬವರು ಕಾರ್ಕಳ ಕಡೆಯಿಂದ ಸ್ಕೂಟರಿನಲ್ಲಿ ಹೆಬ್ರಿ ಸಮೀಪದ ತಾಣ ಎಂಬಲ್ಲಿ ಹೆಬ್ರಿ ಕಡೆಗೆ ಬರುತ್ತಿದ್ದಾಗ ಹಿಂದಿನಿಂದ ಬರುತ್ತಿದ್ದ ಖಾಸಗಿ ಬಸ್ ಚಾಲಕ ಜಗನ್ನಾಥ ಶೆಟ್ಟಿ ನಿರ್ಲಕ್ಷ್ಯತನದಿಂದ ಬಸ್ ಚಲಾಯಿಸಿ ಅಪಘಾತವೆಸಗಿರುವ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಲೆಗೆ ತೀವ್ರ ಗಾಯಗೊಂಡ ರಾಜುರನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.