ಹರ್ಷ ಮೊಯ್ಲಿ ಸ್ಪರ್ಧೆಗೆ ಕಾರ್ಕಳ ಕಾಂಗ್ರೆಸ್ ಪ್ರಮುಖರ ವಿರೋಧ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಕಾರ್ಯಕರ್ತರು ಸೂಚಿಸಿದ ಸರ್ವಸಮ್ಮತ ಅಭ್ಯರ್ಥಿಯನ್ನೇ ಮುಂದಿನ ಚುನಾಣೆಯಲ್ಲಿ ಕಣಕ್ಕಿಳಿಸಬೇಕು ಯಾವುದೇ ಕಾರಣಕ್ಕೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸದೇ ದಿಢೀರನೇ ಪಕ್ಷದ ವರಿಷ್ಠರು ಸೂಚಿಸಿದ ಅಭ್ಯರ್ಥಿಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ಕಾಂಗ್ರೆಸ್ ಮುಖಂಡ ನೇಮಿರಾಜ ರೈ ಹೇಳಿದ್ದಾರೆ.

ಅವರು ಕಾರ್ಕಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ,  “ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮುನಿಯಾಲು ಉದಯ ಶೆಟ್ಟಿ ಕಾಂಗ್ರೆಸ್ ಕಾರ್ಯಕರ್ತರ ಒಮ್ಮತದ ಅಭ್ಯರ್ಥಿಯಾಗಿದ್ದಾರೆ. ಈ

ಕುರಿತು ವಿಧಾನಪರಿಷತ್ ಸದಸ್ಯರಾದ ವಿ.ಎಸ್ ಉಗ್ರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಸೂಚಿಸುವಂತೆ ಹೆಳಿದ ಹಿನ್ನೆಲೆಯಲ್ಲಿ ಕಾರ್ಕಳದಿಂದ ಸುಮಾರು 700ಕ್ಕೂ ಮಿಕ್ಕಿ ಕಾರ್ಯಕರ್ತರು ಹಾಗೂ ಬೂತ್ ಮಟ್ಟದ ಪದಾಧಿಕಾರಿಗಳು ಏಕೈಕ ಅಭ್ಯರ್ಥಿ ಉದಯ ಶೆಟ್ಟಿಯನವರ ಹೆಸರನ್ನು ಸೂಚಿಸಿದ್ದಾರೆ” ಎಂದರು.

ಆದರೆ ಭಾನುವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಗೋಪಾಲ ಭಂಡಾರಿ ಹಾಗೂ ಹರ್ಷ ಮೊಯಿಲಿ ಅವರ ಹೆಸರನ್ನು ಸೂಚಿಸಿದ್ದು, ಬ್ಲಾಕ್ ಮಟ್ಟದ ಅಥವಾ ಬೂತ್ ಮಟ್ಟದ ಸಮಿತಿಯ ಪದಾಧಿಕಾರಿಗಳನ್ನು ಸಂಪರ್ಕಿಸದೆ ಅವರ ಹೆಸರನ್ನು ಸೂಚಿಸಿರುವ ನಿರ್ಧಾರವನ್ನು ತೆಗೆದುಕೊಂಡಿರುವುದು ಬೇಸರವಾಗಿದೆ” ಎಂದರು.

 

LEAVE A REPLY