ಸದ್ಯವೇ ಕರಿಷ್ಮಾಗೆ ಎರಡನೇ ಮದುವೆ

ಕರಿಷ್ಮಾ ಕಪೂರ್ ತನ್ನ ಮೊದಲ ಪತಿಯಿಂದ ದೂರವಾದ ನಂತರ ಕೆಲವು ವರ್ಷಗಳಿಂದ ಉದ್ಯಮಿ ಸಂದೀಪ್ ತೋಶ್ನಿವಾಲಾ ಜೊತೆ ಡೇಟಿಂಗ್ ಮಾಡುತ್ತಿದ್ದಳು. ಈಗ ಅವರಿಬ್ಬರೂ ಸದ್ಯವೇ ಮದುವೆಯಾಗಲಿದ್ದಾರೆ ಎನ್ನುವ ಮಾತು ಕಪೂರ್ ಖಾಂದಾನಿನಿಂದ ಹೊರಬಿದ್ದಿದೆ.

ಕರಿಷ್ಮಾ 2003ರಲ್ಲಿ ಸಂಜಯ್ ಕಪೂರ್ ಜೊತೆ ಮದುವೆಯಾಗಿದ್ದು ಆಕೆಗೆ ಸಮೈರಾ ಹಾಗೂ ಕಿಯಾನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಮೊದಲ ಮದುವೆಯಿಂದ ಸಾಕಷ್ಟು ಸಂಕಟ ಎದುರಿಸಿದ್ದ ಕರಿಷ್ಮಾ ಅಂತೂ ಕಳೆದ ವರ್ಷ ಡೈವೋರ್ಸ್ ಪಡೆದಿದ್ದಳು. ಸಂದೀಪ್ ಕೂಡಾ ಈ ಮೊದಲು ಮದುವೆಯಾಗಿದ್ದು ಕೆಲವು ದಿನಗಳ ಹಿಂದಷ್ಟೇ ಮೊದಲ ಪತ್ನಿಯಿಂದ ಅಧಿಕೃತವಾಗಿ ವಿಚ್ಚೇದನೆ ಪಡೆದಿದ್ದಾರೆ. ಈಗ ಸದ್ಯವೇ ಈ ಇಬ್ಬರು ವಿಚ್ಚೇದಿತರು ತಮ್ಮ ಹೊಸ ಬಾಳಿಗೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕರಿಷ್ಮಾ ತಂದೆ ರಣದೀರ್ ಕಪೂರ್ ಕೂಡಾ `ಕರಿಷ್ಮಾಗೆ ಇನ್ನೂ ಯೌವನ ಇದೆ. ಮತ್ತೆ ಮದುವೆಯಾಗಲು ಆಕೆ ಬಯಸಿದರೆ ನನ್ನ ಆಶೀರ್ವಾದ ಆಕೆಗಿದೆ” ಎಂದು ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.