ಬ್ಯಾಕ್ ಲೆಸ್ ಟ್ರೆಂಡ್ ಹುಟ್ಟುಕಾಕಿದ ಕರೀನಾ

ಕರೀನಾ ಕಪೂರ್ ಖಾನ್ ಒಬ್ಬಳು ಬಾಲಿವುಡ್ಡಿನ ಸ್ಟೈಲಿಷ್ ದಿವಾ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ತನ್ನ ಹಿಂಭಾಗದ ಸೌಂದರ್ಯವನ್ನು ಬಿಚ್ಚಿಡುವುದೆಂದರೆ ಆಕೆಗೆ ಎಲ್ಲಿಲ್ಲದ ಖುಶಿ ಎಂದೇ ಕಾಣುತ್ತದೆ. ತನ್ನ ನಗ್ನ ಬೆನ್ನಿನ ಸೌಂದರ್ಯವನ್ನು ತನ್ನ ಫ್ಯಾಷನೇಬಲ್ ಉಡುಪಿನ ಮೂಲಕ ತೆರೆದಿಡುವುದರಲ್ಲಿ ಆಕೆಗೆ ಸರಿಸಾಟಿ ಯಾರೂ ಇಲ್ಲ. ಪ್ರಿಯಾಂಕಾ ಚೋಪ್ರಾ, ಸೋನಂ ಕಪೂರ್ ದೀಪಿಕಾ ಮೊದಲಾದ ನಟಿಯರು ತಮ್ಮ ಕ್ಲೀವೇಜ್ ತೋರಿಸುವುದರಲ್ಲಿ ಮುಂದಿದ್ದರೆ ಕರೀನಾಗೆ ತನ್ನ ಬ್ಯಾಕ್ ತೋರಿಸುವುದೇ ಇಷ್ಟ. ಪರದೆಯ ಹಿಂದಷ್ಟೇ ಅಲ್ಲ, ಪರದೆ ಮೇಲೆಯೂ ಕರೀನಾ ಹಲವಾರು ಬಾರಿ ಬ್ಯಾಕ್ ಲೆಸ್ ಡ್ರೆಸ್ ತೊಟ್ಟು ಪ್ರೇಕ್ಷಕರಿಗೆ ಕಚಗುಳಿ ಇಟ್ಟಿದ್ದಳು.

ಕರೀನಾ ಈಗ ಒಂದು ಮಗುವಿನ ತಾಯಿಯಾದ ಬಳಿಕವೂ ಇನ್ನೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾಳೆ. ಕಳೆದ ವೀಕೆಂಡ್ ಕರಣ್ ಜೋಹರ್ ಪಾರ್ಟಿಗೆ ಪತಿ ಸೈಫ್ ಆಲಿ ಖಾನ್ ಜೊತೆ ಕರೀನಾ ಬ್ಯಾಕ್ ಲೆಸ್ ಕಪ್ಪು ಧರಿಸಿನಲ್ಲಿ ಬಹಳ ಪೊಗದಸ್ತಾಗಿ ಕಾಣಿಸುತ್ತಿದ್ದಳು.

`ಕಭಿ ಖುಶಿ ಕಭಿ ಗಮ್’ ಚಿತ್ರದಲ್ಲಿ ಕರೀನಾ ಕೆಂಪು ಬ್ಯಾಕ್ ಲೆಸ್ ಧಿರಿಸಿನಲ್ಲಿ ಹೃತಿಕ್ ರೋಷನ್ ಜೊತೆ `ಯೂ ಆರ್ ಮೈ ಸೋನಿಯಾ’ ಹಾಡಿಗೆ ಕುಣಿದ ರೀತಿಯನ್ನು ಅವಳ ಅಭಿಮಾನಿಗಳೆಂದೂ ಮರೆಯಲು ಸಾಧ್ಯವಿಲ್ಲ. ಅದೇ ರೀತಿ ಅವಳು `ಬಾಡಿ ಗಾರ್ಡ್’ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಹಾಡೊಂದರಲ್ಲಿ ಕಲರ್ ಕಲರ್ ಸೀರೆಯಲ್ಲಿ ನಗ್ನ ಬೆನ್ನು ತೋರಿಸುತ್ತಾ ಮೈ ಬಳುಕಿಸಿದ್ದು ನೆನಪಿರಬಹುದು. ಸೆಕ್ಸೀ ಬೆನ್ನು ತೋರಿಸುತ್ತಾ ಚಕ್ಕನೆ ಮುಖ ತಿರುಗಿಸಿ ಪೌಟ್ ತುಟಿಯಲ್ಲಿ ಕಿರುನಗೆ ಬೀರುವುದು ಕರೀನಾಳ ಸಿಗ್ನೇಚರ್ ಸ್ಟೈಲ್. ಕರೀನಾಳ ಕೆಲವು ನಗ್ನ ಬೆನ್ನು ಪ್ರದರ್ಶನದ ಕೆಲವು ಫೊಟೋಗಳು…