ಸೈಪ್ ಶೂಟಿಂಗಿಗೆ ಹೋಗುವಾಗೆಲ್ಲ ಕರೀನಾ ಅಳ್ತಾಳಂತೆ

ಕರೀನಾ ಕಪೂರ್-ಸೈಫ್ ಆಲಿ ಖಾನ್ ಮದುವೆಯಾಗಿ ಈಗಾಗಲೇ ಆರು ವರ್ಷ ಕಳೆದಿದ್ದು ಅವರು ಡೇಟಿಂಗ್ ಮಾಡಲು ಶುರುಮಾಡಿ ಹತ್ತು ವರ್ಷಗಳೇ ಆಗಿವೆ. ಈ ದಂಪತಿಗೆ ಈಗ ಒಂದು ವರ್ಷದ ಮಗ ಕೂಡಾ ಇದ್ದಾನೆ. ಆದರೂ ಸೈಫ್ ಹೊರಗಡೆ ಹೋಗುವಾಗೆಲ್ಲ ಕರೀನಾ ಅಳ್ತಾಳಂತೆ.

ಸೈಫ್ ಹಾಗೂ ಕರೀನಾ ಜೊತೆಯಾಗಿ ನಟಿಸಿದ್ದ `ತಶನ್’ ಚಿತ್ರದ ಶೂಟಿಂಗ್ ಸಮಯದಲ್ಲಿ ಹತ್ತಿರವಾಗಿದ್ದರು. ಕರೀನಾ ಆ ಸಮಯದಲ್ಲಿ ಶಾಹೀದ್ ಕಪೂರ್ ಜೊತೆಗೆ ಆಪ್ತವಾಗಿದ್ದರೂ ಸೈಫ್ ಮೇಲಿನ ಆಕರ್ಷಣೆಯಿಂದಾಗಿ ಶಾಹೀದ್ ಜೊತೆಗೆ ಬ್ರೇಕಪ್ ಮಾಡಿಕೊಂಡು ಸೈಫ್ ತೆಕ್ಕೆ ಸೇರಿದ್ದಳು. ಮತ್ತೆ ಅವರು ನಾಲ್ಕು ವರ್ಷ ಲಿವ್ ಇನ್ ರಿಲೇಶನ್ಶಿಪ್ಪಿನಲ್ಲಿದ್ದು 2012ರಲ್ಲಿ ಅವರು ಮದುವೆಯಾಗಿದ್ದರು. ಈ ಲವ್ವಿಂಗ್ ಕಪಲ್ ಈಗ ಮಗುವಿನ ಜೊತೆ ಆಗೀಗ ವಿದೇಶದಲ್ಲೂ ಹಾಲಿಡೇ ಮಜಾ ಅನುಭವಿಸುತ್ತಾ ತಮ್ಮ ಸಂಬಂಧವನ್ನು ತಾಜಾಗೊಳಿಸಿಕೊಳ್ಳುತ್ತಿರುತ್ತಾರೆ.

ಮೊನ್ನೆ ಕರೀನಾ `ಲ್ಯಾಕ್ಮೆ ಫ್ಯಾಷನ್ ವೀಕ್’ನಲ್ಲಿ ಕಪ್ಪು ಬಣ್ಣದ ಧಿರಿಸಿನಲ್ಲಿ ರ್ಯಾಂಪ್ ವಾಕ್ ಮಾಡಿದ ನಂತರ ತನ್ನ ಹಾಗೂ ಸೈಫ್ ಸಂಬಂಧದ ಬಗ್ಗೆ ಮಾತಾಡುತ್ತಾ “ನಾನು ಎಲ್ಲಾ ಸಾಮಾನ್ಯ ಪತ್ನಿಯರಂತೆ ಈಗಲೂ ಸೈಫ್ ಹೊರಗೆ ಹೋದಾಗೆಲ್ಲ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಸೈಫ್ ಶೂಟಿಂಗಿಗೆ ಹೋಗುವಾಗಲೂ ನನಗೆ ಅಳು ಬರುತ್ತದೆ” ಎಂದು ತನಗಿರುವ ಪತಿಪ್ರೇಮವನ್ನು ಹೇಳಿಕೊಂಡಿದ್ದಾಳೆ. ಕರೀನಾ ಈಗ `ವೀರ್ ದಿ ವೆಡ್ಡಿಂಗ್’ ಚಿತ್ರದಲ್ಲಿ ನಟಿಸುತ್ತಿದ್ದು “ಎಷ್ಟೇ ಯುವನಟಿಯರು ಬಂದರೂ ನನಗೇನೂ ಅಸುರಕ್ಷಿತ ಭಾವನೆ ಇಲ್ಲ. ಚಿತ್ರರಂಗದಲ್ಲಿ ನನಗೆ ನನ್ನದೇ ಆದ ಸ್ಪೇಸ್ ಇದೆ. ನಾನಿನ್ನೂ ಇಪ್ಪತ್ತು ವರ್ಷ ಇದೇ ಫೀಲ್ಡಿನಲ್ಲಿರುತ್ತೇನೆ” ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾಳೆ ಕರೀನಾ.

 

LEAVE A REPLY