ಕರಾವಳಿ ಉತ್ಸವ ಮೆರವಣಿಗೆ : ಸಂಚಾರ ವ್ಯತ್ಯಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕರಾವಳಿ ಉತ್ಸವ ಉದ್ಘಾಟನೆ ಪ್ರಯುಕ್ತ (ಇಂದು) ಡಿ 23ರಂದು ಸಾಂಸ್ಕೃತಿಕ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ.

ಸಂಜೆ 4.30ಕ್ಕೆ ಲಾಲಬಾಗ್ ಕರಾವಳಿ ಉತ್ಸವ ಮೈದಾನದಿಂದ ಹೊರಡುವ ಮೆರವಣಿಗೆ ಲೇಡಿಹಿಲ್-ಮಂಗಳ ಕ್ರೀಡಾಂಗಣ- ಕೆನರಾ ಹೈಸ್ಕೂಲ್-ಸ್ಕೌಟ್ಸ್ ಭವನ-ಮಹಾನಗರಪಾಲಿಕೆ-ಲಾಲಬಾಗ್-ಕೆಎಸ್ಸಾಟಿಸಿ ಬಿಜೈ-ಸಕ್ರ್ಯೂಟ್ ಹೌಸ್ ಮಾರ್ಗವಾಗಿ ಕದ್ರಿ ಉದ್ಯಾನದವರೆಗೆ ಸಂಚರಿಸಲಿದೆ.

ಸಂಜೆ 6ಗಂಟೆಗೆ ಕರಾವಳಿ ಉತ್ಸವ ಕದ್ರಿ ಉದ್ಯಾನವನದಲ್ಲಿ ಉದ್ಘಾಟನೆಯಾಗಲಿದೆ. ಮೆರವಣಿಗೆ ಸಂಚರಿಸುವ ಮಾರ್ಗದಲ್ಲಿ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಪರ್ಯಾಯವಾಗಿ ಇತರೆ ಮಾರ್ಗದಲ್ಲಿ ಸಂಚರಿಸಿ, ಸಹಕರಿಸಲು ಪ್ರಕಟಣೆ ತಿಳಿಸಿದೆ.