ಕರಾವಳಿ ಉತ್ಸವಕ್ಕೆ ಅದ್ದೂರಿ ಚಾಲನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಜಾನಪದ ಸಂಸ್ಕøತಿಯನ್ನು ಬಿಂಬಿಸುವುದರ ಜೊತೆಗೆ ಆಯಾ ಜಾತಿ, ಧರ್ಮಗಳ ಜೀವನ ಸಂಸ್ಕøತಿ, ಜನಪದ, ಯಕ್ಷಗಾನ ಇತ್ಯಾದಿ ಪ್ರಕಾರಕ್ಕಿಂತಲೂ ಅಧಿಕ ಸುಮಾರು 70 ತಂಡಗಳ ಸಾಂಸ್ಕøತಿಕ ಮೆರವಣಿಗೆ-ದಿಬ್ಬಣ ಹಾಗೂ ವಸ್ತು ಪ್ರದರ್ಶನದೊಂದಿಗೆ ಶುಕ್ರವಾರದಂದು ಜಿಲ್ಲಾ ಕರಾವಳಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಕರಾವಳಿ ಉತ್ಸವ ಮೈದಾನದಲ್ಲಿ ಹೊರಟ ಮೆರವಣಿಗೆ ಹ್ಯಾಟ್ ಹಿಲ್ ಪಂಪ್ ಹೌಸ್ ಮುಂಭಾಗ, ರಾಮಕೃಷ್ಣ ವಿದ್ಯಾರ್ಥಿ ನಿಲಯ, ಗಣೇಶ್ ಬೀಡಿ ಕೌಂಪಾಂಡ್, ಪೂಂಜಾ ಬಿಲ್ಡಿಂಗ್ ಇತ್ಯಾದಿ ಮಾರ್ಗವಾಗಿ ಸಾಗಿ ಕದ್ರಿ ಉದ್ಯಾನವನದ ಒಳಗಡೆ ಇರುವ ಕರಾವಳಿ ಉತ್ಸವ ವೇದಿಕೆಯ ಎರಡು ಪಾಶ್ರ್ವಗಳಲ್ಲಿ ಸಂಪನ್ನಗೊಂಡಿತು.

ಚೆಂಡೆ, ಕೊಂಬು, ಕಹಳೆ, ತಟ್ಟೀರಾಯ, ಪಕ್ಕಿನಿಶಾನೆ, ರಣಕಳ, ಜಿಲ್ಲಾ ಪೊಲೀಸ್ ಬ್ಯಾಂಡ್, ಬಸವ ತಂಡ, ಶಂಖದಾಸರು, ಯಕ್ಷಗಾನ ಪಾತ್ರಧಾರಿಗಳು, ಕುದುರೆ ಗಾಡಿ ಇತ್ಯಾದಿಗಳಿದ್ದು, ಕಲಾತಂಡಗಳ ಪ್ರದರ್ಶನವನ್ನು ಸಾರ್ವಜನಿಕರು ಶ್ಲಾಘಿಸಿದರು.