ಕರಾವಳಿ ಉತ್ಸವ ಜೈ ಜೈ

ದ ಕ ಜಿಲ್ಲೆಯಲ್ಲಿ ಮುಖ್ಯವಾಗಿ ಮಂಗಳೂರಿನಲ್ಲಿ ಸರಕಾರದ ವತಿಯಿಂದ ಆಗಬೇಕಾದ ಹಲವಾರು ಕೆಲಸಗಳು ಆಗದೇ ಇರಬಹುದು ಅಥವಾ ನಿಧಾನವಾಗಿ ಆಗಬಹುದು. ಆದರೆ ಒಂದು ಮಾತ್ರ ಯಾವುದೇ ಅಡ್ಡಿ ಆತಂಕಗಳಿಲ್ಲದೆ, ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಅದುವೇ ಕರಾವಳಿ ಉತ್ಸವ. ನಮ್ಮ ಜಿಲ್ಲಾಡಳಿತ, ಜನಪ್ರತಿನಿಧಿಗಳು ಅಧಿಕಾರಿ ವರ್ಗದವರು ಪ್ರತೀ ವರ್ಷ ಕರಾವಳಿ ಉತ್ಸವವನ್ನು ಅದೆಷ್ಟು ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಾರೆಂದರೆ ಇದರಲ್ಲಿ ಶ್ರಮಿಸುವವರನ್ನೆಲ್ಲ ನಾವು ಹೊಗಳಲೇಬೇಕು. ಕರಾವಳಿ ಉತ್ಸವ ಮೊದಲು ಒಂದು ಕಡೆ ನಡೆಯುತ್ತಿತ್ತು. ಈಗ ಹಲವು ಕಡೆಗೆ ವಿಸ್ತರಿಸಿದೆ. ಆಹಾರೋತ್ಸವ ಬೀಚ್ ಉತ್ಸವ ಮೆರವಣಿಗೆ ಇನ್ನೂ ಏನೇನೆಲ್ಲ ಸೇರಿಕೊಂಡಿದೆ. ವಿವಿಧ ಸಂಘಟನೆಗಳು ಈ ವ್ಯವಸ್ಥೆಯಲ್ಲಿ ಸೇರಿಕೊಂಡು ಉತ್ಸಾಹದಿಂದ ಭಾಗವಹಿಸುತ್ತವೆ. ಉತ್ಸವ ನೋಡಿ ಮೈಮರೆತು ಮೈಕ್ ಮುಂದೆ ಭಾಷಣ ಮಾಡುವವರ ಪ್ರತಾಪ ನೋಡಿದರೆ ಮಂಗಳೂರಿಗೆ ಕರಾವಳಿ ಉತ್ಸವ ಸಾಕಲ್ಲವೇ ಬೇರೆಲ್ಲಾ ಯಾಕೆ ಎಂಬ ಭಾವನೆ ಬರದಿರದು ನಗರದಲ್ಲಿ ಕುಡಿಯುವ ನೀರಿನ ಸರಬರಾಜು ಸಮರ್ಪಕವಾಗಿಲ್ಲ ರಸ್ತೆ ಗುಂಡಿಗಳನ್ನು ಎಲ್ಲಾ ಕಡೆ ಮುಚ್ಚಲಾಗಿಲ್ಲ ಫುಟ್ಪಾತುಗಳಂತೂ ನಗರದಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ವಿರಳ ವಾಹನ ಸಂಚಾರ ಸುಗಮಗೊಳಿಸುವ ವ್ಯವಸ್ಥೆ ಇಲ್ಲ ಪಾರ್ಕಿಂಗಿಗೆ ಜಾಗವಿಲ್ಲ ಅಡ್ಡಾದಿಡ್ಡಿ ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿದರೆ ಕೇಳುವವರಿಲ್ಲ ಬಸ್ ಸಂಚಾರದ ಅವ್ಯವಸ್ಥೆಯೇ ಈಗ ವ್ಯವಸ್ಥೆ ಆಗಿಬಿಟ್ಟಿದೆ ಬಸ್ ತಂಗುದಾಣಗಳು ವಿರಳವಿವೆ ಅವುಗಳು ಬೇಕಾದಲ್ಲಿ ಇಲ್ಲ ಸಿಗ್ನಲುಗಳನ್ನು ಅಲ್ಲಲ್ಲಿ ಸ್ಥಾಪಿಸಲಾ ಗಿದೆ ಹೆಚ್ಚಿನವು ಬಳಕೆಯಾಗುತ್ತಿಲ್ಲ ನಂತೂರು ಜಂಕ್ಷನ್ನಿನ ಸಮಸ್ಯೆಯಂತೂ ಗಂಭೀರವಾಗಿದೆ ಇದರ ಬಗ್ಗೆ ಕನಿಷ್ಠ ಚಿಂತನೆಯೂ ನಡೆದಿಲ್ಲ ಹೊಸ ಬಸ್ ನಿಲ್ದಾಣ ನಿರ್ಮಾಣದ ವಿಚಾರ ಆರಂಭಗೊಂಡು ದಶಕಗಳು ಹುರುಳಿವೆ ಏನೂ ಕೆಲಸ ಆಗಿಲ್ಲ ಈಗಿನ ಪರಿಸ್ಥಿತಿ ನೋಡಿದರೆ ಪಂಪ್ವೆಲ್ಲಿನಲ್ಲಿ ಬಸ್ ನಿಲ್ದಾಣ ಆದೀತೆಂದು ತೋರುವುದಿಲ್ಲ ಪಂಪ್ವೆಲ್ಲಿನ ಚತುಷ್ಪಥ ಹೆದ್ದಾರಿ ಕಾಮಗಾರಿ ನಿಂತು ನಾಗರಿಕರಿಗೆ ಅತೀವ ತೊಂದರೆಯಾಗುತ್ತಿದೆ ಹೀಗೆಲ್ಲ ಇದ್ದರೂ ಮಂಗಳೂರಿನಲ್ಲಿ ಪ್ರತಿ ವರ್ಷ ಕರಾವಳಿ ಉತ್ಸವ ಉತ್ಸಾಹದಿಂದ ನಡೆಸಲ್ಪಡುತ್ತಿದೆ

  • ಮಹೇಶ್ ಕಂಕನಾಡಿ  ಮಂಗಳೂರು

LEAVE A REPLY