ಪೊದೆಗಳಿಂದ ಕೂಡಿದ ಕಾರ್ಕಳ ತಾಲೂಕು ಕಚೇರಿ ಅಭಿಲೇಖಾಲಯ ಸ್ವಚ್ಛಗೊಳಿಸಿದ ಸ್ಥಳೀಯಾಡಳಿತ

ಕಚೇರಿ ಆವರಣದೊಳಗಿನ ಪೊದೆಗಳನ್ನು ಸ್ವಚ್ಛಗೊಳಿಸಿರುವುದು

ಕರಾವಳಿ ಅಲೆ ಇಂಪ್ಯಾಕ್ಟ್

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ತಾಲೂಕು ಕಚೇರಿಯ ಅಭಿಲೇಖಾಯ(ರೆಕಾರ್ಡ್ ರೂಂ)ದ ಕಟ್ಟಡದ ಒಳಗಿನ ಆವರಣದಲ್ಲಿ ಗಿಡಗಂಟಿಗಳು ಬೆಳೆದು ಕಚೇರಿ ಪಾಳುಬಿದ್ದ ಕೊಂಪೆಯಾಗಿತ್ತು. ಈ ಕುರಿತು `ಕರಾವಳಿ ಅಲೆ’ ಸಚಿತ್ರ ವರದಿ ಮಾಡಿತ್ತು. ಇದೀಗ ಸುದ್ದಿ ಪ್ರಕಟವಾದ ತಕ್ಷಣವೇ ಕಾರ್ಕಳ ತಾಲೂಕು ಆಡಳಿತ ಎಚ್ಚೆತ್ತು ಕಚೇರಿಯ ಒಳಗಿನ ಖಾಲಿ ಆವರಣದೊಳಗಿನ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿದ್ದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕೈದಿಗಳನ್ನು ಇರಿಸುವ ಸಲುವಾಗಿ ಸೆರೆಮನೆ ಕಟ್ಟಡ ನಿರ್ಮಿಸಲಾಗಿತ್ತು. ಬಳಿಕ ಸೆರೆಮನೆ ಹಿರಿಯಡ್ಕಕ್ಕೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಈ ಕಟ್ಟಡಕ್ಕೆ ಅಭಿಲೇಖಾಲಯ ಕಚೇರಿ ಸ್ಥಳಾಂತರಿಸಲಾಗಿತ್ತು. ಆದರೆ ಕಟ್ಟಡದ ಒಳಗೆ ಕೈದಿಗಳ ಚಟುವಟಿಕೆಗಳಿಗೆ ನಿರ್ಮಿಸಲಾಗಿದ್ದ ವಿಶಾಲ ಆವರಣದಲ್ಲಿ ಪೊದೆಗಳು ಬೆಳೆದು ಸರಕಾರಿ ಕಚೇರಿ ಪಾಳುಬಿದ್ದ ಸ್ಥಿತಿಯಲ್ಲಿತ್ತು. ಈ ಕುರಿತು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ `ಕರಾವಳಿ ಅಲೆ’ ವರದಿ ಪ್ರಕಟಿಸಿ ದುರವಸ್ಥೆಯ ಕುರಿತು ತಾಲೂಕು ಆಡಳಿತದ ಗಮನಕ್ಕೆ ತಂದಿತ್ತು. ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಬಳಿಕ ಅಭಿಲೇಖಾಲಯ ಕಚೇರಿ ಆವರಣ ಸ್ವಚ್ಛವಾದಂತಾಗಿದೆ.