ಮೂರು ಬಾರಿ ಕರಣ್ ಲವ್ ಫ್ಲಾಪ್

ಫಿಲ್ಮ್ ಮೇಕರ್ ಕರಣ್ ಜೋಹರ್ ಹಲವಾರು ರೊಮ್ಯಾಂಟಿಕ್ ಚಿತ್ರ ಮಾಡಿ ಸಕ್ಸಸ್ ಕಂಡಿರಬಹುದು. ಆದರೇನು ಅವರ ಲವ್ ಲೈಫ್ ಮಾತ್ರ ಮೂರು ಬಾರಿ ಫ್ಲಾಪ್ ಆಗಿದೆ. ಈ ಬಗ್ಗೆ ಕರಣ್ ಮಾತಾಡುತ್ತಾ “ನನ್ನ ಸಿನಿಮಾ ನೂರು ಪ್ರತಿಶತ ಪಾಸಾದರೆ ನನ್ನ ಪ್ರೀತಿ ನೂರು ಶೇಕಡಾ ಫೈಲ್. ನಾನು ಯಾರನ್ನು ಪ್ರೀತಿಸಿದೆನೋ ಅವರ್ಯಾರೂ ನನ್ನನ್ನು ಪ್ರೀತಿಸಲೇ ಇಲ್ಲ. ಮೂರು ಬಾರಿ ಪ್ರೀತಿಯಲ್ಲಿ ಸೋತಿದ್ದೇನೆ. ಇದರಿಂದಾಗಿ ಪ್ರೀತಿಯ ವಿಷಯದಲ್ಲಿ ನಾನು ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದೇನೆ”ಎಂದು ತನ್ನ ಅಳಲು ತೋಡಿಕೊಂಡಿದ್ದಾರೆ ಕರಣ್.
“ನಾನು ಸಕ್ಸಸ್ ಸಿನಿಮಾ ನೀಡಿದಾಗೆಲ್ಲ ಪ್ರೀತಿಯಲ್ಲಿ ಸೋತಿದ್ದು, ಅದೊಂತರಾ ಬ್ಯಾಲೆನ್ಸ್ ಆಗಿಬಿಟ್ಟಿದೆ. ನನ್ನದು ಎಲ್ಲಾ ರೆಲೇಶನ್ಶಿಪ್ಪೂ ಫೈಲ್ ಆಗಿದೆ. ಅದಕ್ಕೆ ನನ್ನ ಏಕಮುಖ ಪ್ರೀತಿಯೇ ಕಾರಣ. ಅದೂ ಅಲ್ಲದೇ ನಾನು ಆರಿಸಿಕೊಂಡಿದ್ದು ರಾಂಗ್ ಪರ್ಸನ್ ಇರಬಹುದು” ಎನ್ನುತ್ತಾರೆ ಸದ್ಯ `ಏ ದಿಲ್ ಹೇ ಮುಶ್ಕಿಲ್’ ಚಿತ್ರದ ಸಕ್ಸಸ್ ನೋಡಿರುವ ಕರಣ್. “ನನಗೀಗ 44 ವರ್ಷ. ಕೆಲವೊಮ್ಮೆ ಒಂಟಿತನ ಕಾಡುತ್ತದೆ. ಎಲ್ಲರೂ ಹೇಳುತ್ತಾರೆ ನಿನ್ನ ಪೊಸಿಶನ್ನಿಗೆ ಯಾರು ಬೇಕಾದರೂ ಸಿಗುತ್ತಾರೆ ಎಂದು. ಆದರೆ ನನ್ನನ್ನೇ ಪ್ರೀತಿಸಬಲ್ಲ ನನಗೂ ಇಷ್ಟವಾಗುವವರು ಯಾರೂ ಸಿಕ್ಕೇ ಇಲ್ವೇ” ಎಂದು ಸಂದರ್ಶನವೊಂದರಲ್ಲಿ ತನ್ನ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ ಕರಣ್.