ಐಎಸ್ಸಿಗೆ ಸೇರಿದ ಕಣ್ಣೂರು ನಿವಾಸಿ ಬಾಂಬ್ ದಾಳಿಗೆ ಬಲಿ

ಸಾಂದರ್ಭಿಕ ಚಿತ್ರ

ಕಾಸರಗೋಡು : ಸಿರಿಯಾಕ್ಕೆ ಹೋಗಿ ಇಸ್ಲಾಮಿಕ್ ಸ್ಟೇಟ್ ಶಿಬಿರಕ್ಕೆ ಸೇರ್ಪಡೆಗೊಂಡಿದ್ದಾಗಿ ಹೇಳಲಾಗುತ್ತಿರುವ ಕಣ್ಣೂರು ಮುಂಡೇರಿ ಕಚೇರಿ ಪರಂಬಿನ ನಿವಾಸಿ ಶಾಜಿಲ್ (35) ಬಾಂಬ್ ದಾಳಿಗೆ ಬಲಿಯಾಗಿದ್ದಾಗಿ ಸಹೋದರಗೆ ಫೆÇೀನ್ ಸಂದೇಶ ಬಂದಿದೆ.

ಶಾಜಿ ಕೆಲವು ತಿಂಗಳ ಹಿಂದೆ ಪತ್ನಿ ಹಸ್ಮಿನಿಯಾ (24) ಮತ್ತು ಇಬ್ಬರು ಮಕ್ಕಳೊಂದಿಗೆ ಕೊಲ್ಲಿಗೆ ಹೋಗಿದ್ದ. ಬಳಿಕ ಶಾಜಿಲ್ ಅಲ್ಲಿಂದ ಸಿರಿಯಾಕ್ಕೆ ಹೋಗಿ ಐಎಸ್. ಶಿಬಿರಕ್ಕೆ ಸೇರ್ಪಡೆಗೊಂಡಿದ್ದಾಗಿ ಆತನ ಮನೆಯವರಿಗೆ ಮಾಹಿತಿ ಲಭಿಸಿತ್ತು. ಕಣ್ಣೂರಿನಲ್ಲಿ ಪಾಪ್ಯುಲರ್ ಫ್ರಂಟ್ ಮತ್ತು ಸಿಪಿಎಂ ಕಾರ್ಯಕರ್ತರ ಮಧ್ಯೆ ನಡೆದ ಘರ್ಷಣೆಗೆ ಸಂಬಂಧಿಸಿ ಕಣ್ಣೂರು ಚಕ್ಕೆರಕ್ಕಲ್ ಪೆÇಲೀಸರು ದಾಖಲಿಸಿಕೊಂಡ ನಾಲ್ಕು ಪ್ರಕರಣದಲ್ಲಿ ಈತ ಆರೋಪಿಯೆಂದು ಪೆÇಲೀಸರು ತಿಳಿಸಿದ್ದಾರೆ.